ಕರಾವಳಿ

ಕಾರವಾರದ ಕಡಲ ದಂಡೆಯಲ್ಲಿ ಮತ್ತೆ ನೀಲಿ ‌ಬೆಳಕು!

Pinterest LinkedIn Tumblr


ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕಡಲ ತೀರದಲ್ಲಿ ಮುಂಜಾನೆ ಸೂರ್ಯೋದಯಕ್ಕೂ ಮುಂಚಿತವಾಗಿ ವಾಯುವಿಹಾರಕ್ಕೆ ಹೋದರೆ ಸಮುದ್ರ ತೀರದ ನೀರಲ್ಲಿ ನೀಲಿ ಬಣ್ಣದ ಬೆಳಕು ಕಂಡು ಬರುತ್ತಿದ್ದು ಜನ ಆಶ್ಚರ್ಯವಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮತ್ತೆ ಪಾಚಿ(ಆಲ್ಗೆ) ಬೆಳೆದಿದೆ. ವೈಜ್ಞಾನಿಕವಾಗಿ ಡೈನೋಪ್ಲಾಗಲೆಟ್ ನಾಕ್ಟಿಲುಕ್ ಸಿಂಟಿಲನ್ಸ್ ಎಂಬ ಸೂಕ್ಷ್ಮ ಜೀವಿಗಳು ತಮ್ಮ ದೇಹದಿಂದ ರಾಸಾಯನಿಕವನ್ನು ಹೊರಬಿಟ್ಟಾಗ ನೀಲಿ ಬಣ್ಣದ ಬೆಳಕು ಮೂಡುತ್ತದೆ. ಒಂದೇ ಜೀವ ಕೋಶ ಹೊಂದಿರುವ ಈ ಸೂಕ್ಷ್ಮ ಜೀವಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆ ಗುಂಪಾದಾಗ ಇಂತಹ ವಿದ್ಯಮಾನಗಳು ನಡೆಯೋದು ಸಹಜವಂತೆ.

ಇಂತಹ ವಿದ್ಯಮಾನಗಳು ಇತ್ತೀಚಿಗೆ ಸಹಜವಾಗಿ ನಡೆಯುತ್ತದೆ. ಇದು ಇವತ್ತಿನ ಜನರಿಗೆ ಗೊತ್ತಿಲ್ಲ. ಇತ್ತೀಚಿಗೆ ಸಮುದ್ರ ತೀರದಲ್ಲಿ ಪಾಚಿಗಳು ಹೇರಳವಾಗಿ ಬೆಳೆದುಕೊಳ್ಳುತ್ತಿದೆ ಇದಕ್ಕೆ ಕಾರಣ. ಇದನ್ನು ಆಹಾರವಾಗಿ ಬಳಸುತ್ತಿದ್ದ ಬಂಗಡೆ ಮತ್ತು ಭೂ ತಾಯಿ ಮೀನಿನ ಸಂತತಿ ಕಡಿಮೆ ಆಗಿದೆ. ಈ‌ ಹಿನ್ನೆಲೆಯಲ್ಲಿ ಪಾಚಿಗಳ ಸಂಖ್ಯೆ ಬೆಳೆದುಕೊಳ್ಳುತ್ತಿದೆ. ಈ ಹಿಂದೆ ಕರಾವಳಿಯೂದ್ದಕ್ಕೂ ಇ‌ಂತಹ ವಿಸ್ಮಯ ಕಂಡಿತ್ತು. ಈಗ ಮತ್ತೆ ಕಾಣುತ್ತಿದೆ. ಜನ ಆತಂಕ ಮತ್ತು ಆಶ್ಚರ್ಯಕರರಾಗಿದ್ದಾರೆ. ಭಯ ಪಡುವ ವಿಚಾರ ಇಲ್ಲ ಅಂತಾರೆ ಕಡಲ ಜೀವ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕರು.

ನದಿ ಮತ್ತು ಚರಂಡಿಯಲ್ಲಿರುವ ಪೋಷಕಾಂಶಗಳು ಸಮುದ್ರ ಸೇರುತ್ತವೆ. ಇದರಿಂದ ಸಮುದ್ರದಲ್ಲಿ ಪಾಚಿಗಳು ಹೇರಳವಾಗಿ ಬೆಳೆಯುತ್ತವೆ. ಇದು ನಿರಂತರ. ಆದರೆ ಈಗ ಇದು ಹೊಸದಾಗಿ ಕಾಣಲು ಕಾರಣ ಸಮುದ್ರದಲ್ಲಿ ಮೀನಿನ ಸಂತತಿ ಕ್ಷೀಣಿಸುತ್ತಿರುವುದು. ಕರಾವಳಿಯ ಬಿಸಿಲು ಪಾಚಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ ಅಂತೆ. ಇಂತಹ ಪಾಚಿಗಳನ್ನು ಆಹಾರವಾಗಿ ಬಳಸುವ ಮೀನಿನ ಸಂತತಿ ಆಗ ಹೇರಳವಾಗಿತ್ತು. ಆದರೆ ಈಗ ತೀರಾ ಕಡಿಮೆ ಆಗಿದೆ. ಹೀಗಾಗಿ ಈಗ ಇಂತಹ ಪಾಚಿಗಳ ಉತ್ಪತ್ತಿ ಹೆಚ್ಚಾಗಿದೆ. ಬೆಳಕನ್ನು ಸೂಸುವ ಪಾಚಿಗಳು ಈ‌ ಹಿಂದೆ 1949 ಮೊದಲ ಬಾರಿಗೆ ಲಕ್ಷ ದ್ವೀಪದಲ್ಲಿ ಕಾಣಿಸಿಕೊಂಡಿತ್ತಂತೆ. ಈ ಹಿಂದೆ ಕಾರವಾರದಲ್ಲಿ ಮೊದಲ ಬಾರಿಗೆ 2017‌ರಲ್ಲಿ ಕಂಡಿತ್ತು. ಅದಾದ ಬಳಿಕ ಈ ವರ್ಷ ಎರಡು ಬಾರಿ ಕಂಡಿದೆ. ಇತ್ತಿಚಿಗೆ ಪದೆಪದೆ ಕಾಣಲು ಕಾರಣವೇನು ಎಂಬುದರ ಬಗ್ಗೆ ಈಗ ಅಧ್ಯಯನ ಕೂಡ ನಡೆಯುತ್ತಿದೆ.

ಬೆಳಕು ಸೂಸುವ ಪಾಚಿಗಳು ಕೇವಲ ಸೂರ್ಯೋದಯದ ಮುಂಚಿತವಾಗಿ ಮತ್ತು ರಾತ್ರಿ ಸಮಯದಲ್ಲಿ ಮಾತ್ರ ಕಾಣುತ್ತಿವೆ. ಹೀಗಾಗಿ ಕೆಲವರು ಮಾತ್ರ ಈ ನೀಲಿ ಬೆಳಕನ್ನು ನೋಡಿದ್ದಾರೆ.

Comments are closed.