ಉಡುಪಿ: ಮಕ್ಕಳ ರಕ್ಷಣಾ ನಿರ್ದೇಶನಾಲಯವು ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳ ಪುನರ್ವಸತಿಗೆ ನೆರವಾಗುವುದು ಮಕ್ಕಳ ರಕ್ಷಣಾ ಯೋಜನೆಯ ಉದ್ಧೇಶವಾಗಿರುತ್ತದೆ.
ಆದ್ದರಿಂದ ಮಕ್ಕಳ ನಿರ್ದೇಶನಾಲಯದ ಅಡಿಯಲ್ಲಿ 2020ನೇ ವರ್ಷದ ನವೆಂಬರ್ ತಿಂಗಳನ್ನು ಅಂತರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ದತ್ತು ವಿಷಯಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ಧೇಶದಿಂದ ದತ್ತು ಪಡೆದ ಮಗುವಿನ ಸುರಕ್ಷಾ ಆರೈಕೆ, ಮಕ್ಕಳನ್ನು ದತ್ತು ಪಡೆಯುವುದು ಪೋಷಕರಿಗೆ ಹಾಗೂ ಮಕ್ಕಳಿಗೆ ಹೇಗೆ ಸಂತೋಷದಾಯಕವಾಗಿರುತ್ತದೆ, ಪೋಷಕತ್ವ ಸದರಿ ವಿಷಯಗಳ ಕುರಿತು ಪೋಸ್ಟರ್, ಕಿರುಚಿತ್ರ, ಡ್ಯಾನ್ಸ್ ಹಾಗೂ ಪದ್ಯ ರಚಿಸುವ ಆನ್‌ಲೈನ್ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ.
ಸಿದ್ಧಪಡಿಸಿದ ಪೋಸ್ಟರ್, ಕಿರುಚಿತ್ರ, ಡ್ಯಾನ್ಸ್ ಹಾಗೂ ಪದ್ಯ ರಚನೆಗಳ ಪ್ರತಿಯನ್ನು ನವೆಂಬರ್ 30 ರ ಒಳಗೆ ಇ-ಮೇಲ್ dcp.adoptionmonth2020@gmail.com ಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ನ icps.karnataka.gov.in ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.