ಉಡುಪಿ: ಹಾವು ಕಡಿತದಿಂದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಯಡಮೊಗ್ಗೆ ಗ್ರಾಮದ ವಾಟಾರ ಹಾಡಿ ಎಂಬಲ್ಲಿ ನಡೆದಿದೆ.
(ಸಾಂದರ್ಭಿಕ ಚಿತ್ರ)
ಮೃತರನ್ನು ಯಡಮೊಗ್ಗೆ ಗ್ರಾಮದ ವಾಟಾರ ಹಾಡಿ ನಿವಾಸಿ ಸುಮತಿ ಎಂಬವರ ಮಗಳು ಪೃಥ್ವಿ(11) ಎಂದು ಗುರುತಿಸಲಾಗಿದೆ. ಬೆಳಗ್ಗೆ ತನ್ನ ತಾಯಿಯೊಂದಿಗೆ ಮನೆ ಸಮೀಪದ ತೋಟಕ್ಕೆ ಹೋದ ಪೃಥ್ವಿಗೆ ವಿಷಪೂರಿತ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಪೃಥ್ವಿ, ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.