ಕರಾವಳಿ

ಉಡುಪಿಯಲ್ಲಿ ನಾಲ್ಕು ಹೆಬ್ಬಾವುಗಳು ಪತ್ತೆ: ರಕ್ಷಿಸಿ ಕಾಡಿಗೆ ಬಿಟ್ಟ ಸ್ಥಳೀಯರು

Pinterest LinkedIn Tumblr

ಉಡುಪಿ: ಉಡುಪಿ ನಗರದ ಪೂರ್ಣ ಪ್ರಜ್ಞಾ ಕಾಲೇಜಿನಿಂದ ಶ್ರೀಮತಿ ಅಮಣ್ಣಿ ರಾಮಣ್ಣ ಶೆಟ್ಟಿ ಹಾಲ್‌ಗೆ ಹೋಗುವ ರಸ್ತೆಯ ಬದಿಯಲ್ಲಿ ಕುರುಚಲು ಗಿಡಗಳಿಂದ ತುಂಬಿರುವ ಖಾಲಿ ಜಾಗದಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಸೇರಿದಂತೆ ಒಟ್ಟು ನಾಲ್ಕು ಹೆಬ್ಬಾವುಗಳು ಪತ್ತೆಯಾಗಿದ್ದು ಗಣೇಶ್ ಆಚಾರ್ಯ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯಿತು.

ಖಾಸಗಿಯವರಿಗೆ ಸೇರಿದ್ದ ಖಾಲಿ ಜಾಗದಲ್ಲಿ ಹುಲ್ಲನ್ನು ಕಳೆದ ಎರಡು ವರ್ಷಗಳಿಂದ ತೆರವುಗೊಳಿಸಿರಲಿಲ್ಲ. ಇದರಿಂದ ಹೆಬ್ಬಾವು ವಾಸಿಸಿದ್ದವು.

12 ಅಡಿ ಉದ್ದದ ಒಂದು, ಎಂಟು ಅಡಿ ಉದ್ದದ ಎರಡು ಹಾಗೂ ಐದು ಅಡಿ ಉದ್ದದ ಒಂದು ಹೆಬ್ಬಾವುಗಳು ಪತ್ತೆಯಾಗಿದ್ದು ಇನ್ನಷ್ಟು ಹೆಬ್ಬಾವಿನ ಮರಿ ಈ ಜಾಗದಲ್ಲಿ ಇರಬಹುದೆಂದು ಶಂಕಿಸಲಾಗಿದೆ.

ಕುಂಜಿಬೆಟ್ಟುವಿನ ಗಣೇಶ್ ಆಚಾರ್ಯ ಹೆಬ್ಬಾವುಗಳನ್ನು ರಕ್ಷಿಸಿದ್ದು ಸುರಕ್ಷಿತವಾಗಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದರೆ. ಈ ವೇಳೆ ಬೃಹತ್ ಗಾತ್ರ ಹೆಬ್ಬಾವು ಗಣೇಶ್ ಆಚಾರ್ಯ ಕೈಗೆ ಕಚ್ಚಿದ್ದು ಇದರಿಂದ ಗಾಯಗೊಂಡ ಅವರಿಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ನ್ಯಾಯವಾದಿ ಲಕ್ಷ್ಮಣ್ ಶೆಣೈ, ಸುಧೀರ್ ನಾಯಕ್, ಅಟೋ ಚಾಲಕ ರಾಜ ಕುಮಾರ್, ಅಶ್ವಥ್ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

 

Comments are closed.