ಉಡುಪಿ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಇಂದು 70ನೇ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಅದರಂತೆಯೇ ಹಾಲಾಡಿಯವರ ಅಭಿಮಾನಿಗಳಾದ ಪ್ರಶಾಂತ್ ಪಡುಕರೆ ಮತ್ತು ವಸಂತ ಕಾಂಚನ್ ಗುಂಡ್ಮಿಯವರು ಬ್ರಹ್ಮಾವರ ಕೂರಾಡಿಯಲ್ಲಿರುವ ‘ಅಪ್ಪ ಅಮ್ಮ’ ಅನಾಥಾಲಯ ಆಶ್ರಮಕ್ಕೆ ಅಕ್ಕಿಯನ್ನು ನೀಡುವ ಮೂಲಕ ವಿಶಿಷ್ಟವಾಗಿ ಜನ್ಮದಿನಾಚರಣೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಒಂದಷ್ಟು ಕಾಲ ಅನಾಥಾಲಯದ ವೃದ್ಧರ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರಶಾಂತ್ ಪೂಜಾರಿ ಮತ್ತು ಪ್ರದೀಪ್ ಕೋಟ ಇದ್ದರು.
Comments are closed.