ಉಡುಪಿ: ಬಜಾಜ್ ಫೈನಾನ್ಸ್ ಎನ್ನುವ ಹೆಸರಿನಲ್ಲಿ ಫೇಸ್ಬುಕ್ ಮುಖಾಂತರ ಸಂಪರ್ಕಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ 17,150ರೂ. ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)
ಈ ಬಗ್ಗೆ ನೊವೆಲ್ ಲೋಬೋ ಉಡುಪಿ ಸೆನ್ ಪೊಲೀಸ್ ಠಾಣೆ ಗೆ ದೂರು ನೀಡಿದ್ದು, ಬಜಾಜ್ ಫೈನಾನ್ಸ್ ಎಂಬ ಫೇಸ್ಬುಕ್ ಖಾತೆ ಮೂಲಕ ಅವನ್ನು ಸಂಪರ್ಕಿಸಿ ಕಡಿಮೆ ಬಡ್ಡಿದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ್ದಾರೆ. ಸಾಲದ ಸರ್ವಿಸ್ ಚಾರ್ಜ್ ರೂಪದಲ್ಲಿ ಮಾ.17ರಂದು ಬಜಾಜ್ ಫೈನಾನ್ಸ್ ಎಂಬ ಹೆಸರಿನಲ್ಲಿ ಐ.ಸಿ.ಐ.ಸಿ.ಐ ಬ್ಯಾಂಕ್ ಖಾತೆಗೆ ರೂ. 14,650 ರೂ. ನೊವೆಲ್ ಲೋಬೋ ಅವರಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆ ಬಳಿಕ ಮೇ.18ರಂದು ಸ್ಟೇಟ್ ಬ್ಯಾಂಕ್ ಖಾತೆ 2,500ರೂ. ಗೂಗಲ್ ಪೇ ಮುಖಾಂತರ ಹೀಗೆ ಒಟ್ಟು ರೂ. 17,150 ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಉಡುಪಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 27-2021 ಕಲಂ : 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
Comments are closed.