ಉಡುಪಿ: ಕಾರ್ಕಳದ ಮಿಯಾರು ಗ್ರಾಮದ ಜೋಡುಕಟ್ಟೆಯಲ್ಲಿರುವ ಸಾರ್ವಜನಿಕ ಬಸ್ಸು ನಿಲ್ದಾಣದ ಹಿಂಬದಿ ಪ್ರದೇಶದಲ್ಲಿ ಇಸ್ಪೀಟ್ ಆಡುವಾಗ ಕಾರ್ಕಳ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು ವೇಳೆ ಮೂವರು ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರ ಠಾಣಾಧಿಕಾರಿ ಮಧು ಬಿ.ಇ ನೇತೃತ್ವದ ಪೊಲೀಸರ ತಂಡವು ಖಚಿತ ವರ್ತಮಾನದ ಮೇರೆಗೆ ಈ ಕಾರ್ಯಚರಣೆ ನಡೆಸಿದ್ದು, ಕಾರ್ಕಳ ಪೆರ್ವಾಜೆ ಎನ್.ಆರ್.ರೋಡ್‌ನ ನಿವಾಸಿ ಸಮರ್ಥ್ (22), ಮಿಯಾರು ಜೋಡುಕಟ್ಟೆ ಬಲಿಪರಪಾಡಿಯ ನಿವಾಸಿ ಸುಧೀರ್(30) ಎಂಬರನ್ನು ಬಂಧಿಸಿದ್ದಾರೆ.
ಇನ್ನು ಆರೋಪಿಗಳು ಜೂಜಿಗಾಗಿ ಪಣವನ್ನಾಗಿಟ್ಟ ನಗದು ರೂ. 3130 , 52 ಇಸ್ಪೀಟ್ ಎಲೆಗಳು, ಹಳೆಯ ದಿನಪತ್ರಿಕೆಯೊಂದು, 2 ಕಾರುಗಳನ್ನು ಸ್ವಾಧೀನಪಡಿಸಿದ್ದಾರೆ. ಕಾರುಗಳ ಒಟ್ಟು ಮೌಲ್ಯ 10,00,000 ಆಗಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.