ಕರಾವಳಿ

ಕಾನೂನ ಬಾಹಿರ ದತ್ತು: ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಚಿಕ್ಕಮಗಳೂರು ಜಿಲ್ಲಾ ಮಕ್ಕಳಾ ರಕ್ಷಣಾ ಘಟಕದಿಂದ ಬಂದ ದೂರಿನಂತೆ , ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯಾಚರಣೆ ನಡೆಸಿ ಕಾನೂನು ಬಾಹಿರ ದತ್ತು ಪ್ರಕ್ರಿಯೆ ನಡೆಸಿರುವವರ ವಿರುದ್ಧ ಕೋಟ ಪೊಲೀಸ್‌ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ, ಕೋಟಾಠಾಣೆಯ ಉಪ ನಿರೀಕ್ಷಕರಾದ ಸಂತೋಷ್ ಬಿ. ಪಿ, ಸಹಾಯಕ ಉಪ ನಿರೀಕ್ಷಕಿ ಮುಕ್ತಾ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿರುತ್ತಾರೆ.

ಹಂಗಾರಕಟ್ಟೆಯ ಫಯಾಜ್ ಶಾಹಿಸ್ತಾ ರವರು ಉಡುಪಿಯ ಹುಸೈನ್ ಎಂಬಾತನ ಮೂಲಕ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಒಂದು ವರ್ಷದ ಹಿಂದೆ ಹೆರಿಗೆ ಆದ ಹೆಣ್ಣು ಮಗುವನ್ನು ಸ್ವಂತ ತಂದೆ ತಾಯಿ ಸುರೇಶ ಮತ್ತು ಸುಕನ್ಯಾರವರು ಕಾನೂನು ಬಾಹೀರವಾಗಿ ನೀಡಿರುತ್ತಾರೆ. ನಂತರ ಮಗುವಿನ ಜನನ ಪ್ರಮಾಣ ಪತ್ರವನ್ನು ಸರ್ಕಾರಿ ಸರಕಾರಿ ತಾಲೂಕ ಆಸ್ಪತ್ರೆ ಕೊಪ್ಪ ಇಲ್ಲಿ ಜನನವಾದಂತೆ ಪ್ರಮಾಣ ಪತ್ರ ವನ್ನು ಅಲ್ಲಿನ ವೈದ್ಯಾಧಿಕಾರಿ ಡಾ .ಬಾಲಕೃಷ್ಣರವರಿಂದ ಪಡೆಯಿರುವುದಾಗಿ ತಿಳಿಸಿದ್ದು ಈ ಪೈಕಿ 6 ಮಂದಿ ವಿರುದ್ಧ ಬಾಲನ್ಯಾಯ ಕಾಯ್ದೆ ಉಲ್ಲಂಘನೆಯಾಗಿದ್ದು ಪ್ರಕರಣ ದಾಖಲಾಗಿದೆ.

1 ವರ್ಷ 2 ತಿಂಗಳಿನ ಹೆಣ್ಣು ಮಗುವನ್ನು ಕಾನೂನು ಬಾಹಿರದತ್ತು ಪಡೆದವರಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಅವರ ನಿರ್ದೇಶನದಂತೆ ಕೃಷ್ಣಾನುಗ್ರಹ ದತ್ತುಸಂಸ್ಥೆ ಸಂತೆಕಟ್ಟೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಕೋವಿಡ್ ನಿಂದ ಮಕ್ಕಳ ತಂದೆ ತಾಯಿ ಇಬ್ಬರು ಮೃತರಾದಲ್ಲಿ ಮಕ್ಕಳು ಅನಾಥ, ದತ್ತು ಪಡೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋಸ ಹೋಗದಿರಿ.ಕಾನೂನು ಬದ್ದ ದತ್ತು ಬೇಕಾದಲ್ಲಿ , ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ ಮಣಿಪಾಲ ಅಥವಾ ಮಕ್ಕಳ ಕಲ್ಯಾಣ ಸಮಿತಿ ಉಡುಪಿಯವರನ್ನು ಸಂಪರ್ಕಿಸುವಂತೆ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ತಿಳಿಸಿರುತ್ತಾರೆ.

Comments are closed.