ಕರಾವಳಿ

ಉಡುಪಿಯಲ್ಲಿ ಕೀ ಚೈನ್ ಮಾರಾಟ ಮಾಡುತ್ತಿರುವ ನಾಲ್ವರು ಮಕ್ಕಳ ರಕ್ಷಣಾ ಕಾರ್ಯಾಚರಣೆ

Pinterest LinkedIn Tumblr

ಉಡುಪಿ: ಕೊಪ್ಪಳ ಮತ್ತು ಶಿರಸಿ ಮೂಲದ ಆದಿ ಉಡುಪಿಯಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರ ಮಕ್ಕಳು ಉಡುಪಿಯ ಬಿಗ್ ಬಜಾರ್ ಮತ್ತು ಕೋರ್ಟ್ ರಸ್ತೆಗಳಲ್ಲಿ ಕೀ ಚೈನ್ ಮಾರಾಟ ಮಾಡುತ್ತಿದ್ದು ಅವರನ್ನು ರಕ್ಷಿಸಲಾಗಿದೆ.

ಮಕ್ಕಳು ಕೀ ಚೈನ್ ಮಾರಾಟ ಮಾಡುತ್ತಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ನಾಗರತ್ನ ರವರು ಮಾಹಿತಿ ನೀಡಿದ್ದು ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ , ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಆಪ್ತ ಸಮಾಲೋಚಕಿ ಅಂಬಿಕಾ ಮಕ್ಕಳನ್ನು ರಕ್ಷಿಸಿದ್ದಾರೆ.

ಈ ಮಕ್ಕಳು ಶಾಲೆ ಇಲ್ಲದೆ ಇರುವುದರಿಂದ ಕೀ ಚೈನ್ ಮಾರಾಟ ಮಾಡುತ್ತಿದ್ದು ನಾಲ್ವರು ಗಂಡು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಉಡುಪಿಯ ಸಿಯಸ್ಐ ಬಾಯ್ಸ್ ಹೋಮ್ ನಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.

Comments are closed.