ಕರಾವಳಿ

ಕೊರೋನಾ 3ನೇ ಅಲೆ ನಿಯಂತ್ರಣಕ್ಕೆ ತಜ್ಞರ ಸಲಹೆ ಪಡೆಯಲು ಸಿಎಂ ತುರ್ತು ಸಭೆ | ಅಂಗಾಂಗ ದಾನಕ್ಕೆ ಬೊಮ್ಮಾಯಿ ಕರೆ

Pinterest LinkedIn Tumblr

ಉಡುಪಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ 3ನೇ ಅಲೆ ಬರುವ ಲಕ್ಷಣವಿದೆ ಎನ್ನಲಾಗಿದ್ದು ಮಕ್ಕಳಲ್ಲಿ ವಿಶೇಷವಾಗಿ ಕಳೆದ 10 ದಿನಗಳಿಂದ ಕೊರೋನಾ ಮಹಾಮಾರಿ ಕಾಣಿಸಿಕೊಳ್ಳುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉಡುಪಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ 3ನೇ ಅಲೆ ತಗ್ಗಿಸಲು ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಬೆಂಗಳೂರಿಗೆ ತೆರಳಿದ ತಕ್ಷಣ ತಜ್ಞರ ತುರ್ತು ಸಭೆ ಕರೆಯಲಿದ್ದು ತಜ್ಞರ ವರದಿ ಮತ್ತು ಅವರ ಅಭಿಪ್ರಾಯ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅಂಗಾಂಗ ದಾನಕ್ಕೆ ಮುಂದೆ ಬನ್ನಿ..
ಇಂದು ವಿಶ್ವ ಅಗಾಂಗ ದಿನವಾಗಿದ್ದು, ಅಂಗಾಂಗ ದಾನ ಮಾಡುವುದಿರಿಂದ ಮತ್ತು ಅದನ್ನು ಕಸಿ ಮಾಡುವುದರಿಂದ ಅನೇಕ ಜೀವನಗಳನ್ನು ಉಳಿಸಬಹುದು ಮತ್ತು ಅನೇಕರ ಬಾಳಿಗೆ ಬೆಳಕಾಗುತ್ತದೆ. ಅದು ಹೃದಯ, ಕಿಡ್ನಿ, ಯಕೃತ್ ಹೀಗೆ ಬೇರೆ ಬೇರೆ ಅಂಗಾಂಗಗಳ ಯಶಸ್ವಿಯಾಗಿ ಕಸಿಯಾಗುತ್ತಿದೆ. ಹೀಗಿರುವಾಗ ಹೆಚ್ಚಿನ ಮಂದಿ ಅಂಗಾಂಗ ದಾನಗಳಿಗೆ ಮುಂದೆ ಬಂದರೆ ಸಾವಿರಾರು ಜೀವಗಳನ್ನು ಉಳಿಸಬಹುದು, ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಮಾಡುತ್ತಿದ್ದೇನೆ, ನೀವು ಕೂಡ ಮಾಡಿ ಎಂದು ರಾಜ್ಯದ ಜನತೆಗೆ ಸಿಎಂ ಕರೆ ನೀಡಿದರು.

Comments are closed.