ಕುಂದಾಪುರ: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮ ಬೈಂದೂರು ಹಳ್ನಾಡ್ ಸಭಾಂಗಣದಲ್ಲಿ ನಡೆಯಿತು.
ಗಣ್ಯರ ಉಪಸ್ಥಿತಿಯೊಂದಿಗೆ ಭಾರತ ಮಾತೆಗೆ ದೀಪ ಬೆಳಗಿಸಿ,ಪುಷ್ಪಾರ್ಚನೆ ಮಾಡಿ ನಂತರ ಅಖಂಡ ಭಾರತದ ಭೂಪಟಕ್ಕೆ ಮಾತೆಯರ ಮೂಲಕ ದೀಪ ಬೆಳಗಿಸಿ, ಎಲ್ಲಾ ಕಾರ್ಯಕರ್ತರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರರಾದ ಚಂದ್ರಶೇಖರ ನಾವುಡ ,ಸಭಾಧ್ಯಕ್ಷರಾಗಿ ಎಚ್.ಭೋಜರಾಜ ಶೆಟ್ಟಿ ಬೈಂದೂರು ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಶಂಕರ್ ಕೋಟ, ಹಿಂಜಾವೇ ಬೈಂದೂರು ಅಧ್ಯಕ್ಷ ರಾಜೇಶ್ ಆಚಾರ್ ಇದ್ದರು.
ಕಾರ್ಯಕ್ರಮದ ಪ್ರಮುಖ ಹಂತವಾದ ಅಖಂಡ ಭಾರತದ ಉದ್ದೇಶ, ಸ್ವಾತಂತ್ರ್ಯ ಪೂರ್ವದ ಕರಾಳ ಇತಿಹಾಸದ ವಿಚಾರಗಳನ್ನು, ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರು, ಹೋರಾಟದ ಕಲ್ಪನೆಯ ರಾಷ್ಟ್ರದ ಬಗ್ಗೆ ಹಿಂಜಾವೇ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಕಾರ್ಕಳ ತಮ್ಮ ಒಂದು ಗಂಟೆಗೆ ಸುದೀರ್ಘ ಭಾಷಣದಲ್ಲಿ ಸವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೋವೀಡ್ ನಿಯಮ ಪಾಲಿಸುವ ನಿಟ್ಟಿನಲ್ಲಿ ಆಗಮಿಸಿದ ಎಲ್ಲರಿಗೂ ಮಾಸ್ಕ್ ,ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿತ್ತು.
Comments are closed.