ಕುಂದಾಪುರ: ತ್ರಾಸಿ ಗ್ರಾಮದ ಮರವಂತೆಯ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಮುಳ್ಳಿಕಟ್ಟೆ ಹೊಸಾಡು ನಿವಾಸಿ ನಿಶಾನ್ (21), ಮರವಂತೆ ಸಮೀಪದ ನಿವಾಸಿ ಪ್ರಥಮ್ ಕುಮಾರ್ (20) ಆರೋಪಿಗಳು.
(File Photo)
ತ್ರಾಸಿ ಗ್ರಾಮದ ಪ್ರವಾಸಿ ಮಂದಿರದ ಬಳಿ ಗಾಳಿ ಮರದ ಕೆಳಗೆ ಇವರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಗಂಗೊಳ್ಳಿ ಪಿಎಸ್ಐ ನಂಜಾನಾಯ್ಕ್ ಎನ್. ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇಬರಿಂದ 5 ಸಾವಿರ ರೂಪಾಯಿ ಮೌಲ್ಯದ 120 ಗ್ರಾಂ ತೂಕದ ಗಾಂಜಾ, ಚಿಕ್ಕಚಿಕ್ಕ ಪ್ಲಾಸ್ಟಿಕ್ ಜಿಪ್ ಕವರ್-15, ಬ್ಯಾಗ್-1 ಹಾಗೂ ನಗದು 680 ರೂಪಾಯಿ ನಗದು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.