ಕರಾವಳಿ

ಕೊಂಕಣ ಖಾರ್ವಿ ಸಮಾಜದಿಂದ ಕುಂದಾಪುರ ಕೋಡಿಯಲ್ಲಿ ಸಮುದ್ರ ಪೂಜೆ

Pinterest LinkedIn Tumblr

ಕುಂದಾಪುರ: ಕುಂದಾಪುರ ಕೊಂಕಣಿ ಖಾರ್ವಿ ಸಮಾಜದಿಂದ ಶ್ರೀ ಮಹಾಕಾಳಿ ದೇವಳದ ಅಧ್ಯಕ್ಷ ಜಯಾನಂದ ಖಾರ್ವಿ ಮುಂದಾಳತ್ವದಲ್ಲಿ ಸಮುದ್ರ ಪೂಜೆಯು ಕುಂದಾಪುರ ಕೋಡಿ ಕಿನಾರೆಯಲ್ಲಿ ಸಾಂಪ್ರದಾಯಿಕವಾಗಿ ಜರುಗಿತು.

ದೇವಳದ ಪ್ರದಾನ ಅರ್ಚಕರಾದ ಸುಮಂತ್ ಭಟ್ ಪೋರೋಹಿತ್ಯದಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯದಲ್ಲಿ ಉಪಾಧ್ಯಕ್ಷ ಪಿ.ಗಣಪತಿ ಖಾರ್ವಿ ಮದ್ದುಗುಡ್ಡೆ, ಮುಕ್ತೇಸರ ಆನಂದ ನಾಯ್ಕ್ , ಸಲಹೆಗಾರ ಪ್ರಕಾಶ್.ಆರ್ ಖಾರ್ವಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಮದೇವ ಖಾರ್ವಿ ಸಹಿತ ಆಡಳಿತ ಮಂಡಳಿಯ ಸದಸ್ಯರು,ಅಪಾರ ಸಂಖ್ಯೆಯಲ್ಲಿ ಭಕ್ತರೂ ಹಾಜರಿದ್ದರು.

ಕಾರ್ಯಕ್ರಮದ ಸಂಯೋಜನೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ಸುನಿಲ್ ಖಾರ್ವಿ ತಲ್ಲೂರು ನೆರವೇರಿಸಿದರು.

Comments are closed.