ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಮತ್ತು ಸಮುದ್ರ ಸೇರುವ ಸಂಗಮ ಸ್ಥಳದಲ್ಲಿ ಗಂಗೊಳ್ಳಿ ಮೂಲದವರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಗಂಗೊಳ್ಳಿಯ ಶ್ರೀಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲಕತ್ವದ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ಹೊನ್ನವಾರ ಬಂದರಿಗೆ ವಾಪಸ್ಸು ಬರುತ್ತಿದ್ದಾಗ ಬೋಟ್ ಮುಳುಗಿದೆ ಎನ್ನಲಾಗಿದೆ. ಬೋಟ್ ಮುಳುಗಡೆಯಿಂದ ಅಪಾರ ಪ್ರಮಾಣದ ಮೀನು ಮತ್ತು ಬೋಟಿನಲ್ಲಿದ್ದ ಸಲಕರಣೆಗಳು ಸಮುದ್ರ ಪಾಲಾಗಿದೆ.
ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಬೋಟಿನಲ್ಲಿದ್ದ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬೋಟ್ ಮುಳುಗಡೆಯಿಂದ ಬೋಟ್ ಮಾಲಕರಿಗೆ ಅಂದಾಜು 30 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿಯಲಾಗಿದೆ.
Comments are closed.