ಕರಾವಳಿ

ಹುಟ್ಟುಹಬ್ಬದಂದು ಉಡುಪಿ ಶ್ರೀ ಕೃಷ್ಣನ ದರ್ಶನ‌ ಪಡೆದ ಎವರ್‌ಗ್ರೀನ್‌ ಹೀರೋ ಅನಂತ್ ನಾಗ್

Pinterest LinkedIn Tumblr

ಉಡುಪಿ: ‘ಆಬ್ರಕಡಾಬ್ರಾ’ ಸಿನಿಮಾ ಚಿತ್ರೀಕರಣಕ್ಕೆಂದು ಉಡುಪಿಗೆ ಆಗಮಿಸಿರುವ ಕನ್ನಡದ ಹಿರಿಯ ನಟ, ಎವರ್‌ಗ್ರೀನ್‌ ಹೀರೋ ಅನಂತ್ ನಾಗ್ ಅವರು ಸೆ.4 ರಂದು ತಮ್ಮ ಜನ್ಮದಿನದ ಹಿನ್ನೆಲೆ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು.

ಪತ್ನಿ ಗಾಯತ್ರಿ‌ ಅನಂತ್ ನಾಗ್ ಅವರೊಂದಿಗೆ ಶನಿವಾರ ಶ್ರೀ ಮಠಕ್ಕೆ ಆಗಮಿಸಿದ ಅವರು ದೇವರ ದರ್ಶನ ಪಡೆದು ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಭ ಮಠದ ಗಾಯಕ ನಾರಾಯಣ ಸರಳಾಯ, ಮ್ಯಾನೇಜರ್ ಗೋವಿಂದರಾಜು ಮೊದಲಾದವರಿದ್ದರು.

ಉಡುಪಿಯಲ್ಲಿ ನಡೆಯುತ್ತಿದೆ ಚಿತ್ರೀಕರಣ…
ರಕ್ಷಿತ್‌ ಶೆಟ್ಟಿ ಪರಂವಾ ಸ್ಟುಡಿಯೋ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಆಬ್ರಕಡಾಬ್ರ’ ಚಿತ್ರದಲ್ಲೂ ಅನಂತ್‌ನಾಗ್‌ ಅವರು ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ಮ್ಯಾಜಿಕ್ ಆಧಾರಿತ ವಿಭಿನ್ನ ಕಥಾಹಂದರವುಳ್ಳ ಈ ಸಿನೆಮಾದ ಚಿತ್ರೀಕರಣ ಸದ್ಯ ಉಡುಪಿ ಆಸುಪಾಸಿನಲ್ಲಿ ನಡೆಯುತ್ತಿದೆ‌. ಶಿಶಿರ್ ರಾಜಮೋಹನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಡುಪಿಗೆ ಚಿತ್ರೀಕರಣಕ್ಕಾಗಿ ಆಗಮಿಸಿದ ಅನಂತ್ ನಾಗ್ ಅವರು ಮಣಿಪಾಲದಲ್ಲಿ ಉಳಿದುಕೊಂಡಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.