ಉಡುಪಿ: ಕೇಂದ್ರ ಸರ್ಕಾರ ಘೋಷಿಸಿರುವ ಸೆಪ್ಟೆಂಬರ್ 14ರ ದಿನವನ್ನು ಹಿಂದಿ ದಿವಸ್ ಎಂದು ಆಚರಿಸುವ ಬಗ್ಗೆ ಮತ್ತು ಆಡಳಿತದಲ್ಲಿ ಹಿಂದಿಯನ್ನು ಹೇರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಯನ್ನು ಜಯಕರ್ನಾಟಕ ಸಂಘಟನೆಯು ರಾಜ್ಯಾಧ್ಯಕ್ಷರಾದ ಬಿ ಎನ್ ಜಗದೀಶ್ ರವರ ನೇತೃತ್ವದಲ್ಲಿ ರಾಜ್ಯ ವ್ಯಾಪ್ತಿಯಲ್ಲಿ ವಿರೋಧಿಸುತ್ತಿರುವುದಾಗಿ ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1.ಭಾರತದ ಸಂವಿಧಾನದ ಆರ್ಟಿಕಲ್ 343(1) ಪ್ರಕಾರ, ಭಾರತದ ಸಂವಿಧಾನವು ಸ್ಪಷ್ಟವಾಗಿ ತಿಳುಸುತ್ತದೆ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ
2.ಭಾರತದ ಸಂವಿಧಾನದ ಆರ್ಟಿಕಲ್ 344 (1) ಮತ್ತು351ರ ಪ್ರಕಾರ ಭಾರತ ಸರ್ಕಾರವು ತನ್ನ ದೇಶದ 22ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ ಅದರಲ್ಲಿ ಕನ್ನಡ ಮತ್ತು ಹಿಂದಿಯು ಸಹ ಸೇರಿವೆ. ಆದರೆ ಇಲ್ಲಿ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖ ಮಾಡಿಲ್ಲ
3. ಭಾರತದ ಸಂವಿಧಾನದ ಆರ್ಟಿಕಲ್ 343(1) ಪ್ರಕಾರ,
ಭಾರತದ ಸಂವಿಧಾನವು ಅನುಷ್ಠಾನಕ್ಕೆ ಬಂದ ದಿನ 26ಜನವರಿ 1950ರಿಂದ ಮುಂದಿನ 15ವರ್ಷಗಳ ವರೆಗೆ ದೇವನಾಗರಿ ಲಿಪಿಯನ್ನು ಮತ್ತು ಇಂಗ್ಲಿಷ್ ಭಾಷೆಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಆಯ್ಕೆ ಮಾಡಿ ಕೊಳ್ಳಬಹುದು ಎಂದು ಹೇಳಲಾಗಿದೆ ಮತ್ತು ಈ ಆರ್ಟಿಕಲ್
1965 ಜನವರಿ 26 ನಂತರ ಅನೂರ್ಜಿತವಾಗಿದೆ, ಆದರೆ ಇಂದಿಗೂ ಈ ಒಂದು ಆರ್ಟಿಕಲ್ ನ ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡಿಲ್ಲ ಮತ್ತು ಈ ಆರ್ಟಿಕಲ್ ನಲ್ಲಿಯು ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಲಾಗಿಲ್ಲ
4. ಭಾರತದ ಸಂವಿಧಾನದ ಆರ್ಟಿಕಲ್ 344(1) ಮತ್ತು 351 ಪ್ರಕಾರ ಕೇಂದ್ರ ಸರ್ಕಾರ ಆಯ್ಕೆ ಮಾಡಿದ 22 ರಾಷ್ಟ್ರೀಯ ಭಾಷೆಗಳಲ್ಲಿ ಕನ್ನಡವೇ ಅತಿ ಉತ್ಕೃಷ್ಟ ಭಾಷೆಯೆಂದು ಉಲ್ಲೇಖಿತವಾಗಿದೆ, ಹಾಗಿದ್ದರು ಇಲ್ಲಿಯು ಸಹ ಹಿಂದಿಯನ್ನು ರಾಷ್ಟ್ರೀಯ ಭಾಷೆಯೆಂದು ಉಲ್ಲೇಖಿಸಲಾಗಿಲ್ಲ
5.ಭಾರತದ ಸಂವಿಧಾನ 350a ಪ್ರಕಾರ, ಪ್ರತಿ ರಾಜ್ಯ ಸರ್ಕಾರವು ಆಡಳಿತ ಭಾಷೆಯಾಗಿ ತನ್ನ ಮಾತೃಭಾಷೆಯನ್ನೆ ಬಳಸಬೇಕು ಹಾಗೂ ಕಡ್ಡಾಯವಾಗಿ ಅಲ್ಲಿನ ಮಕ್ಕಳಿಗೆ ಮತ್ತು ನಾಗರೀಕರಿಗೆ ಶಿಕ್ಷಣದಲ್ಲಿ ಸಾರ್ವತ್ರಿಕವಾಗಿ ತನ್ನ ಮಾತೃಭಾಷೆಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕೆಂದು ತಿಳಿಸಲಾಗಿದೆ, ಇಲ್ಲಿಯು ಸಹ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖಿಸಿಲ್ಲ
ಇಷ್ಟೆಲ್ಲ ಉಲ್ಲೇಖಗಳು ಭಾಷೆಯಗಳ ವಿಚಾರವಾಗಿಯೆ ಭಾರತದ ಸಂವಿಧಾನದಲ್ಲಿದ್ದರು ಸಹ, ಕೇಂದ್ರ ಸರ್ಕಾರ ತಮ್ಮ ಮಲತಾಯಿ ದೋರಣೆ ಇಂದ ಮತ್ತು ತಮಗಿರುವ ಹಿಂದಿ ಭಾಷೆಯ ಮೇಲಿನ ಮೋಹದಿಂದಾಗಿ ರಾಷ್ಟ್ರದ ಎಲ್ಲಾ ರಾಜ್ಯಗಳ ಮೇಲು ಸಹ ಹಿಂದಿಯನ್ನು ಹೇರುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡಿರುವಂತಹ ಮೋಸ ಹಾಗೂ ರಾಜ್ಯಗಳ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದ್ದು, ಸಂವಿಧಾನದಲ್ಲಿಯೇ ಇಲ್ಲದಂತಹ ವಿಷಯಗಳನ್ನು ಸರ್ಕಾರ ಜನರ ಮೇಲೆ ಹೇರುತ್ತಿರುವುದು ಅಸಂವಿಧಾನಿಕ ಮತ್ತು ಭಾರತದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ
ಇದು ಮುಂದಿನ ದಿನ ಮಾನಗಳಲ್ಲಿ ಭಾರತದಲ್ಲಿನ ಶಾಂತಿಯನ್ನು ಕದಡುವಂತಹ ಹಂತಕ್ಕು ಸಹ ಹೋಗಬಹುದಾಗಿದ್ದು ಅಖಂಡ ಭಾರತದ ಕನಸು ಭಾರತೀಯರ ಮನಸಲ್ಲಿ ನುಚ್ಚು ನೂರಾಗುವ ದಿನಗಳು ಬರತ್ತವೇನೋ ಎಂಬ ಆತಂಕ ಕಾಣುತ್ತಿದೆ
ಹೀಗಾಗಿ ತಾವುಗಳು ಸೆಪ್ಟೆಂಬರ್ 14ರಂದು ಕೇಂದ್ರ ಸರ್ಕಾರ ಘೋಷಿಸಿರುವ ಹಿಂದಿ ದಿವಸವೆಂಬ
ಅಸಂವಿಧಾನಿಕವಾದ ವಿಚಾರಕ್ಕೆ ಬೆಂಬಲ ನೀಡದೆ, ಹಿಂದಿಯನ್ನು ಕನ್ನಡಿಗರ ಮೇಲೆ ಹೇರಬೇಕೆಂಬ ನಿಲುವನ್ನು ದೂರವಿಟ್ಟು ಕನ್ನಡಿಗರ ಸಾರ್ವಭೌತ್ವವನ್ನು ಎತ್ತಿ ಹಿಡಿಯಬೇಕಾಗಿ ಕೋರುತಿದ್ದೇವೆ
ರಾಜ್ಯದ ಸಂಸದರೆ ಒಂದಾಗಿ ಕನ್ನಡಕ್ಕೆ ರಾಷ್ಟ್ರೀಯ ಭಾಷೆಯ ಸ್ಥಾನ ಮಾನ ಕೊಡಿಸಲು ಮುಂದಾಗಿ.
ಇಲ್ಲದೇ ಹೋದಲ್ಲಿ ಜಯ ಕರ್ನಾಟಕ ಸಂಘಟನೆಯು ಕರ್ನಾಟಕದ ಪ್ರತಿ ಗ್ರಾಮಗಳಲ್ಲಿಯು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡು ಸರ್ಕಾರದ ಈ ಅಸಂವಿಧಾನಿಕ ನೀತಿಯನ್ನು ವಿರೋಧಿಸಬೇಕಾಗುತ್ತದೆ ಎಂದು ಸತೀಶ ಪೂಜಾರಿ ಈ ಮೂಲಕ ಎಚ್ಚರಿಸಿದರು.
Comments are closed.