ಉಡುಪಿ: ಬೈಕ್ ಸವಾರ ಅಪಾಯಕಾರಿ ತಿರುವಿನಲ್ಲಿ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿ ಹಿಂಬದಿಯ ಲಾರಿಯಡಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹೆಬ್ರಿ ತಾಲೂಕಿನ ವರಂಗ ಎಂಬಲ್ಲಿ ಸಂಭವಿಸಿದೆ.
ಸಾಗರ ಮೂಲದ ಜಿನದತ್ತ ಜೈನ್ (42) ಎಂಬವರು ಮೃತಪಟ್ಟ ಬೈಕ್ ಸವಾರ. ಅವರು ಬುಧವಾರ ಸಂಜೆ ಸುಮಾರಿಗೆ ಕಾರ್ಕಳ ಕಡೆಯಿಂದ ಹೆಬ್ರಿ ಮಾರ್ಗವಾಗಿ ಸಾಗರಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ವರಂಗ ಗ್ರಾಮದ ಕೆಲ್ ಟೆಕ್ ಕಂಪನಿಗೆ ಹೋಗುವ ಸಂಪರ್ಕ ರಸ್ತೆಯ ಬಳಿಯ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.