ಕರಾವಳಿ

ಸ್ವ-ಉದ್ಯೋಗಕ್ಕೆ ಮುಂದಾಗುವ ಯುವಕರಿಗೆ ಪ್ರತಿಯೊಬ್ಬರು ಸಹಕಾರ ನೀಡಿ : “ಕಲಿಜಿಗ” ಉದ್ಘಾಟಿಸಿ ನಟ ರೂಪೇಶ್ ಶೆಟ್ಟಿ.

Pinterest LinkedIn Tumblr

ಮಂಗಳೂರು : ಯುವಕರು ಸ್ವ ಉದ್ಯೋಗ ಮಾಡುವ ಮೂಲಕ ಜೀವನ ರೂಪಿಸಬೇಕು. ಈ ರೀತಿ ಸ್ವ ಉದ್ಯೋಗಕ್ಕೆ ಮುಂದಾಗುವ ನಮ್ಮ ಊರಿನ ಯುವಕರಿಗೆ ಎಲ್ಲರು ಸಹಕಾರ ನೀಡಬೇಕು. ಎಂದು ಖ್ಯಾತ ಚಿತ್ರ ನಟ ರೂಪೇಶ್ ಶೆಟ್ಟಿ ಹೇಳಿದರು.

ಅವರು ನಗರದ ಜ್ಯೋತಿ ಸರ್ಕಲ್ ಬಳಿಯ ಫಳ್ನಿರ್ ರಸ್ತೆಯಲ್ಲಿ ಶುಭಾರಂಭಗೊಂಡ “ಕಲಿಜಿಗ” (ಶೇಂದಿ) ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಶೇಂದಿ ಪ್ರಕೃತಿ ದತ್ತವಾದ ಪಾನೀಯವಾಗಿದ್ದು, ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಶೇಂದಿ ಸಿಗುತ್ತಿಲ್ಲ. ಆದರೆ ಇಲ್ಲಿ ಶುದ್ಧವಾದ ಶೇಂದಿ ಮಾತ್ರವಲ್ಲದೇ ಉತ್ತಮವಾದ ಮೀಣಿನ ಖಾಧ್ಯದೊಂದಿಗೆ ಸಾಂಪ್ರದಾಯಿಕ ಊಟ ಕೂಡ ಸಿಗುತ್ತದೆ. ಮಿಥುನ್ ಅವರ ಈ ರೆಸ್ಟೋರೆಂಟ್ ನ ಬ್ರ್ಯಾಂಚ್ ಗಳು ಅಲ್ಲಲ್ಲಿ ಆರಂಭವಾಗಲಿ ಎಂದು ಶುಭಾ ಹಾರೈಸಿದ ಅವರು, ಯುವಕರ ಕನಸಿನ ಯೋಜನೆಯೊಂದಿಗೆ ಆರಂಭವಾಗಿರುವ ಈ ಉದ್ಯಮಕ್ಕೆ ಎಲ್ಲರು ಪ್ರೋತ್ಸಾಹ ನೀಡಿ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರದಾನ ಅಥಿತಿಯಾಗಿ ಭಾಗವಹಿಸಿದ ಮಾಜಿ ಶಾಸಕ ಜೆ.ಆರ್.ಲೋಬೋ ಅವರು ಮಾತನಾಡಿ, ಜನರಿಗೆ ಶುದ್ಧವಾದ ಶೇಂದಿಯನ್ನು ನೀಡಲು ಸರಕಾರ ಕ್ರಮಕೈಗೊಳ್ಳಬೇಕು. ಬಿಲ್ಲವ ಹಾಗೂ ಈಡಿಗ ಸಮುದಾಯದವರು ಇದನ್ನೆ ತಮ್ಮ ಕುಲಕಸುಬಗಿಸಿಕೊಂಡು ಜೀವನ ಸಾಗಿಸಿಕೊಂಡಿದ್ದರು. ಇದೀಗ ಇಲ್ಲಿ ಮಿಥುನ್ ಅವರು ಸ್ವ ಉದ್ಯೋಗದ ಮೂಲಕ ಆರೋಗ್ಯಕ್ಕೆ ಕೂಡ ಉತ್ತಮವಾದ ಶುದ್ಧವಾದ ಶೇಂದಿಯನ್ನು ನೀಡಲು ಮುಂದೆ ಬಂದಿರುವುದು ಸಂತಸದ ವಿಚಾರ. ಅವರು ಈ ಉದ್ಯಮದಲ್ಲಿ ಯಶಸ್ಸು ಪಡೆಯಲಿ ಎಂದು ಶುಭ ಹಾರೈಸಿದರು.

ಶೆಂದಿಯ ಜೊತೆ ವಿವಿಧ ಬಗೆಯ ಮೀನಿ ಖಾಧ್ಯಗಳು, ಮೀನು ಊಟ, ಗಂಜಿ ಊಟವನ್ನು ಗ್ರಾಹಕರಿಗೆ ರುಚಿ ಹಾಗೂ ಶುಚಿತ್ವದೊಂದಿಗೆ ಉಣಬಡಿಸಲಾಗುವುದು ಎಂದು ಕಲಿಜಿಗ ಫ್ಯಾಮಿಲಿ ರೆಸ್ಟೋರೆಂಟ್ ಮಾಲ್ಹಕ ಮಿಥುನ್ ಬಿ.ಕೆ ತಿಳಿಸಿದರು.

ಪ್ರಮುಖರಾದ ಪುಷ್ಪರಾಜನ್, ಶ್ರೀಮತಿ ರೋಹಿಣಿ, ಟಿ.ಕೆ ಸುಧೀರ್, ರಿತೇಶ್, ಮೋಹನಂಗಯ್ಯ ಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ ಹಾಗು ಚಿತ್ರ : ಸತೀಶ್ ಕಾಪಿಕಾಡ್

Comments are closed.