ಮಂಗಳೂರು : ಹೊಸದಾಗಿ ಸ್ಥಾಪಿತವಾದ “ಮಂಗಳೂರು ತಾಲೂಕು ಬಿಲ್ಲವ ಸಂಘ” ದ ಉದ್ಘಾಟನಾ ಸಮಾರಂಭವು ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಶ್ರೀ ಕೊರಗಪ್ಪ ಸ್ಮಾರಕ ಸಭಾಂಗಣದಲ್ಲಿ 2022 ಸೆಪ್ಟೆಂಬರ್ 4ರಂದು ಭಾನುವಾರ ಬೆಳಗ್ಗೆ ಗಂಟೆ 10ಕ್ಕೆ ನಡೆಯಲಿದೆ ಎಂದು ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಜಿತೇಂದ್ರ ಜೆ.ಸುವರ್ಣ ತಿಳಿಸಿದರು.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರು ತಾಲೂಕು ಬಿಲ್ಲವ ಸಂಘದ ಉದ್ಘಾಟನೆಯನ್ನು ಧೀಮಂತ ನಾಯಕರಾದ ಮಾಜಿ ಕೇಂದ್ರ ಸಚಿವ ಶ್ರೀ ಬಿ. ಜನಾರ್ದನ ಪೂಜಾರಿ ಮತ್ತು ಕರ್ನಾಟಕ ಸರಕರಾದ ಮಾಜಿ ಮುಖ್ಯ ಸಚೇತಕರಾದ ವಸಂತ ಬಂಗೇರ ಅವರು ನೆರವೇರಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವರಾದ ಶ್ರೀ ಸುನೀಲ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ತಿನ ಪ್ರತಿಪಕ್ಷ ಮುಖಂಡ ಶ್ರೀ ಬಿ.ಕೆ. ಹರಿಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಸಮಾರಂಭದಲ್ಲಿ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಶ್ರೀ ಹರೀಶ್ ಕುಮಾರ್, ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ, ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ (ಎಸ್ ಎನ್ ಡಿಪಿ) ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷರಾದ ಶ್ರೀ ಸೈದಪ್ಪ ಗುತ್ತೇದಾರ್ ಬೆಂಗಳೂರು, ರಾಜ್ಯ ಹಿಂದುಳಿದ ವರ್ಗಗಳ ಸಮತಿ ಸದಸ್ಯರಾದ ಶ್ರೀ ಕೆ.ಟಿ.ಸುವರ್ಣ, ಕಿಯೊನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೂಲ್ಕಿ ಬಿಲ್ಲವ ಮಹಾಮಂಡಲ ಅಧ್ಯಕ್ಷ ಶ್ರೀ ರಾಜಶೇಖರ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ಶ್ರೀ ನವೀನ್ ಚಂದ್ರ ಸುವರ್ಣ, ದ.ಕ. ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೊಮಯ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಸಾಯಿರಾಮ್, ಕಂಕನಾಡ ಬ್ರಹ್ಮಬೈದರ್ಕಳ ಗರೋಡಿ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ಚಿತ್ತರಂಜನ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಸಮಿತಿ ಕೋಶಾಧಿಕಾರಿ ಶ್ರೀ ಪದ್ಮರಾಜ್, ಕುದ್ರೋಳಿ ಶ್ರೀ ಗೋಕರ್ಣನಾಥ ಕೋಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ. ರಾಮಚಂದ್ರ. ಆತ್ಮ ಶಕ್ತಿ ವಿವಿದೊದ್ದೇಶ ಸಹಕಾರಿ ಸಂಘ ಅಧ್ಯಕ್ಷ ಶ್ರೀ ಚಿತ್ತರಂಜನ್ ಬೋಳಾರ್, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಧ್ಯಕ್ಷ ಶ್ರೀ ಜಯಾನಂದ, ಹಿರಿಯ ನ್ಯಾಯವಾದಿ ಶ್ರೀ ಟಿ. ನಾರಾಯಣ ಪೂಜಾರಿ, ವೆನ್ ಲಾಕ್ ಆಸ್ಪತ್ರೆ ಹಿರಿಯ ವೈದ್ಯರಾದ ಡಾ. ಸದಾನಂದ ಸುವರ್ಣ, ನಾರಾಯಣ ಗುರು ಅಧ್ಯಯನ ಪೀಠ ಅಧ್ಯಕ್ಷ ಶ್ರೀ ಗಣೇಶ್ ಅಮೀನ್ ಸಂಕಮಾರ್, ದಕ್ಷಿಣ ಕನ್ನಡ ಜಿಲ್ಲಾ ಯುವ ಜಾತ್ಯತೀತ ಜನತಾದಳ ಅಧ್ಯಕ್ಷ ಶ್ರೀ ಅಕ್ಷಿತ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ಉದಯ ಅಮೀನ್ ಮಟ್ಟು, ಬಿರ್ವೆರ್ ಕುಡ್ಲ ಅಧ್ಯಕ್ಷ ಉದಯ ಪೂಜಾರಿ, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಎಂ.ಎಸ್ ಕೋಟ್ಯಾನ್, ನಮ್ಮ ಕುಡ್ಲ ನಿರ್ದೇಶಕರಾದ ಲೀಲಾಕ್ಷ ಕರ್ಕೇರ, ಹಿರಿಯ ಗುತ್ತಿಗೆದಾರರ ಶ್ರೀ ಮಹಾಬಲ ಪೂಜಾರಿ ಕಡಂಬೋಡಿ, ಬಿಲ್ಲವ ಶಕ್ತಿ ಅಧ್ಯಕ್ಷ ಶ್ರೀ ಸುರೇಶ್ ಚಂದರ್ ಕೋಟ್ಯಾನ್, ಬಿಲ್ಲವ ಬ್ರಿಗೇಡೇ ಅಧ್ಯಕ್ಷ ಅವಿನಾಶ್ ಸುವರ್ಣ ಮತ್ತಿತರರು ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿರುವರು ಎಂದವರು ವಿವರ ನೀಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಶ್ರೀ ಜಿತೇಂದ್ರ ಜೆ.ಸುವರ್ಣ ವಹಿಸುವರು. ಮಂಗಳೂರು ತಾಲೂಕು ಬಿಲ್ಲವ ಸಂಘದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ ಐವತ್ತಕ್ಕು ಹೆಚ್ಚು ಬಿಲ್ಲವ ಸಂಘಟನೆಗಳು ಈ ತಾಲೂಕು ಸಂಘದ ಸಂಪರ್ಕದಲ್ಲಿವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಮತ್ತು ಅವರ ಆಧ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ನಮ್ಮ ಸಂಘ ಕೆಲಸ ಮಾಡಲಿದೆ. ಮಂಗಳೂರು ತಾಲೂಕು ಬಿಲ್ಲವ ಸಂಘದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ ಆರುವತ್ತಕ್ಕು ಹೆಚ್ಚು ಬಿಲ್ಲವ ಸಂಘಟನೆಗಳು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸಂಘಗಳ ಜತೆಗೆ ತಾಲೂಕು ಸಂಘ ಸಂಪರ್ಕ ಹೊಂದಿದ್ದು, ನಾವು ಜತೆಗೂಡಿ ಕೆಲಸ ಮಾಡಲಿದ್ದೇವೆ.
ಪ್ರಮುಖವಾಗಿ ಶಿಕ್ಷಣ, ಸಂಘಟನೆ, ನಿರುದ್ಯೋಗ ನಿವಾರಣೆಗೆ ಬೇಕಾದ ಕಾರ್ಯಕ್ರಮಗಳು, ಬಡವರಿಗೆ ಸಹಾಯ, ಸರಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವುದು. ಸಮಾಜದ ಕಟ್ಟಕಡೆಯ ಜನರ ಬೇಡಿಕೆಗಾಗಿ ಸರಕಾರವನ್ನು ಒತ್ತಾಯಿಸುವ ಕೆಲಸಗಳನ್ನು ಸಂಘಟನೆ ನಡೆಸಲಿದೆ.
ಯುವಕರಲ್ಲಿ ಧಾರ್ಮಿಕ ಪ್ರಜ್ಞೆ, ರಾಜಕೀಯ ಪ್ರಜ್ಞೆ ಮೂಡಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.
ಹಿಂದುಳಿದ ವರ್ಗಗಳ ಯುವಕರಲ್ಲಿ ಸರಿಯಾದ ರಾಜಕೀಯ ಪ್ರಜ್ಞೆ ಬೆಳೆಸುವ ಕೆಲಸ ಕೂಡ ಅಗತ್ಯವಾಗಿ ಅಗಬೇಕಾಗಿದೆ. ಆ ನಿಟ್ಟಿನಲ್ಲಿ ಕೂಡ ಇತರ ಸಂಘಟನೆಗಳೊಡನೆ4 ಸೇರಿಕೊಂಡು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನೂತನ ಸಂಘದ ಕಾರ್ಯಾಧ್ಯಕ್ಷ ಸುರೇಶ್ಚಂದ್ರರ್ ಕೋಟ್ಯಾನ್ ತಿಳಿಸಿದರು.
ಮಂಗಳೂರು ತಾಲೂಕು ಬಿಲ್ಲವ ಸಂಘ(ರಿ.) ಪದಾಧಿಕಾರಿಗಳ ವಿವರ :
ಗೌರವ ಅಧ್ಯಕ್ಷರುಃ ರಂಜನ್ ಮಿಜಾರ್
ಅಧ್ಯಕ್ಷರುಃ ಜಿತೇಂದ್ರ ಜೆ.ಸುವರ್ಣ
ಕಾರ್ಯಾಧ್ಯಕ್ಷರುಃ ಸುರೇಶ್ಚಂದ್ರರ್ ಕೋಟ್ಯಾನ್
ಪಾರ್ವತಿ ಅಮೀನ್, ಅವಿನಾಶ್ ಬಂಗೇರ, ಗಣೇಶ ಪೂಜಾರಿ
ಪ್ರಧಾನ ಕಾರ್ಯದರ್ಶಿಃ ಲೋಕನಾಥ ಪೂಜಾರಿ
ಕೋಶಾಧಿಕಾ : ಪುರುಷೋತ್ತಮ ಪೂಜಾರಿ
ಸಂಘಟನಾ ಕಾರ್ಯದರ್ಶಿಃ ಸುರೇಶ್ ಪೂಜಾರಿ.
Comments are closed.