ಕರಾವಳಿ

ಹಿಂದುಳಿದ ವಿದ್ಯಾರ್ಥಿನಿಗಳಿಗೆ ಉಚಿತ ಎನ್ ಇ‌ಇಟಿ ಮತ್ತು ಜೆ‌ಇ‌ಇ ಕೋಚಿಂಗ್ ಮತ್ತು ವಿದ್ಯಾರ್ಥಿವೇತನ

Pinterest LinkedIn Tumblr

ಮಂಗಳೂರು : ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು ಹಾಗೂ ಸಬಲೀಕರಣಗೊಳ್ಳಬೇಕು ಎಂಬ ಕಾರಣಕ್ಕೆ ಆಕಾಶ್ ಬೈಜೂಸ್ ‘ ಹೊಸ ಮಾದರಿಯ ಶಿಕ್ಷಣವನ್ನು ಪ್ರಾರಂಭಿಸಿದೆ.

ಎ ಎನ್ ಟಿ ಎಚ್ ಇ 2022 ರ ಭಾಗವಾಗಿ ಸುಮಾರು 2000 ಹಿಂದುಳಿದ ವಿದ್ಯಾರ್ಥಿನಿಗಳಿಗೆ ಉಚಿತ ಎನ್ ಇ‌ಇಟಿ ಮತ್ತು ಜೆ‌ಇ‌ಇ ಕೋಚಿಂಗ್ ಮತ್ತು ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಿದೆ ಎಂದು ಏರಿಯ ಬ್ಯುಸ್‌ನೆಸ್ ಹೆಡ್ ವಿಶ್ವನಾಥ್ ಪಿ.ಜಿ ತಿಳಿಸಿದರು.

ನಗರದಲ್ಲಿ ANTHE 2022 ಅನ್ನು ಅನಾವರಣಗೊಳಿಸಿದ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ, ಒಂದು ಹೆಣ್ಣು ಮಗು ಅಥವಾ ಒಂಟಿ ಪೋಷಕ (ತಾಯಿ) ಇರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದವರು ತಿಳಿಸಿದರು.

ಯೋಜನೆಯ ಪ್ರಕಾರ, ಗುರುತಿಸಲಾದ ಎಲ್ಲಾ ವಿದ್ಯಾರ್ಥಿಗಳು ಆಕಾಶ್ ಬೈಜೂಸ್ ನ ನ್ಯಾಷನಲ್ ಟ್ಯಾಲೆಂಟ್ ಹಂಟ್ ಪರೀಕ್ಷೆ – 2022(ಎ ಎನ್ ಟಿ ಎಚ್ ಇ 2022)ಪ್ರಮುಖ ವಿದ್ಯಾರ್ಥಿವೇತನ ಪರೀಕ್ಷೆಗೆ ಹಾಜರಾಗುತ್ತಾರೆ, ಇದು ನವೆಂಬರ್ 5 ರಿಂದ13, 2022 ರ ನಡುವೆ ದೇಶಾದ್ಯಂತ ಆನ್ಲೈನ್ ಮತ್ತು ಆಫ್ಲೈನ್ ಮೋಡ್ ನಲ್ಲಿ ನಡೆಯಲಿದೆ.

ಎಲ್ಲರಿಗೂ ಶಿಕ್ಷಣ ಎಂಬ ಅಭಿಯಾನದ ವಿದ್ಯಾರ್ಥಿವೇತನಗಳನ್ನು ಸಾಮಾನ್ಯ ಎ ಎನ್ ಟಿ ಎಚ್ ಇ ವಿದ್ಯಾರ್ಥಿವೇತನದೊಂದಿಗೆ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಹಿಂದಿನಂತೆ, ಎ ಎನ್ ಟಿ ಎಚ್ ಇ 2022ರ 13ನೇ ಆವೃತ್ತಿಯು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೇ.೧೦೦ರ ತನಕ ವಿದ್ಯಾರ್ಥಿವೇತನ ನೀಡುತ್ತದೆ ಮತ್ತು ಉತ್ತಮ ಅಂಕ ಪಡೆದವರಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಸ್ಕಾಲರ್ಶಿಪ್ಗಳ ಜೊತೆಗೆ, 5 ವಿದ್ಯಾರ್ಥಿಗಳು ಪೋಷಕರೊಂದಿಗೆ ಎನ್ ಎ ಎಸ್ ಎ ಗೆ ಉಚಿತ ಪ್ರವಾಸವನ್ನು ಗೆಲ್ಲಲಿದ್ದಾರೆ. ಎ ಎನ್ ಟಿ ಎಚ್ ಇ ಈವರೆಗೆ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದೆ ಎಂದು ವಿಶ್ವನಾಥ್ ಪಿ.ಜಿ ವಿವರ ನೀಡಿದರು. ಹೆಚ್ಚಿನ ಮಾಹಿತಿಗಾಗಿ, anthe.aakash.ac.inಗೆ ಲಾಗ್ ಇನ್ ಮಾಡುವಂತೆ ತಿಳಿಸಿದ್ದಾರೆ.

ಪಿ ಆರ್ ಓ ವರುಣ್ ಸೋನಿ, ಶಿಕ್ಷಣ ತಜ್ಞರ ಸಹಾಯಕ ನಿರ್ದೇಶಕ ಶ್ಯಾಮ್ ಪ್ರಸಾದ್.ಎಮ್, ಬ್ರಾಂಚ್ ಮ್ಯಾನೇಜರ್ ಪರಮೇಶ್ವರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.