ಕರಾವಳಿ

ಅಂಕದಕಟ್ಟೆಯಲ್ಲಿ ಹೋಟೆಲ್ ‘ಪ್ರಜ್ಞಾ’ ಉದ್ಘಾಟಿಸಿದ ಪುರಸಭಾ ಸದಸ್ಯ ವಿ. ಪ್ರಭಾಕರ್

Pinterest LinkedIn Tumblr

ಕುಂದಾಪುರ: ಗಣೇಶ್ ಪೂಜಾರಿ ಮಾಲಿಕತ್ವದ ‘ಪ್ರಜ್ಞಾ’ ಹೋಟೆಲ್ ತಾಲೂಕಿನ ಅಂಕದಕಟ್ಟೆ ಸರ್ಜನ್ ಆಸ್ಪತ್ರೆ ಎದುರು ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.

ಕುಂದಾಪುರ ಪುರಸಭೆ ಸದಸ್ಯ ವಿ. ಪ್ರಭಾಕರ್ ನೂತನ ಹೋಟೆಲ್ ಉದ್ಘಾಟಿಸಿ ಮಾತನಾಡಿ, ಕರಾವಳಿ ಜಿಲ್ಲೆಯು ಊಟೋಪಚಾರಕ್ಕೆ ಹೆಸರು ವಾಸಿಯಾಗಿದೆ. ಇಲ್ಲಿನ ಆತೀಥ್ಯಕ್ಕೆ ರಾಜ್ಯ, ಹೊರರಾಜ್ಯದವರು ಮನಸೋಲುತ್ತಾರೆ. ಕುಂದಾಪುರದ ಅಂಕದಕಟ್ಟೆಯ ಪ್ರಜ್ಞಾ ಸಂಸ್ಥೆಯು ತನ್ನ ಉತ್ತಮ ಸೇವೆ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಹೋಟೆಲ್ ಮಾಲಿಕರಾದ ಗಣೇಶ್ ಪೂಜಾರಿ-ಪದ್ಮಾವತಿ ದಂಪತಿ, ಮಕ್ಕಳಾದ ಪ್ರಜ್ಞಾ, ಪ್ರಥಮ್, ಹಿತೈಷಿಗಳಾದ ವಿಷ್ಣು, ಚೈತನ್ಯ , ರಾಜು, ನಾಗೇಶ್, ಗೋವಿಂದ, ಹಿರಿಯರಾದ ಬಾಬು ಪೂಜಾರಿ, ಸಣ್ಣಮ್ಮ ಪೂಜಾರಿ ಹಾಗೂ ಸಿಬ್ಬಂದಿಗಳಿದ್ದರು.

ಹೋಟೆಲ್ ಪ್ರಜ್ಞಾದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಊಟ ಸಿಗಲಿದ್ದು ಬಾಳೆ ಎಲೆ ಮೀನು ಊಟ ಸಹಿತ, ಚೈನೀಸ್, ತಂದೂರಿ ಹಾಗೂ ಸೀ ಪುಡ್ ದೊರೆಯಲಿದೆ.

Comments are closed.