ಕರಾವಳಿ

ಮಂಗಳೂರು ಕೆಎಸ್‍ ಆರ್ ಟಿಸಿಯಿಂದ ಡಿ.31ರ ವರೆಗೆ ಕೇರಳ ಹಾಗೂ ಮಡಿಕೇರಿ ಪ್ಯಾಕೇಜ್ ಪ್ರವಾಸ

Pinterest LinkedIn Tumblr

ಮಂಗಳೂರು,ಡಿ.23 : ಕೆಎಸ್‍ಆರ್‍ಟಿಸಿಯ ಮಂಗಳೂರು ವಿಭಾಗದಿಂದ ಕೇರಳ ಪ್ಯಾಕೇಜ್ (ವಿವಿಧ ದೇವಸ್ಥಾನ, ಪ್ರೇಕ್ಷಣೀಯ ಸ್ಥಳಗಳಿಗೆ) ಹಾಗೂ ಮಡಿಕೇರಿ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆಯನ್ನು ಡಿಸೆಂಬರ್ 31 ರವರೆಗೆ ಕರ್ನಾಟಕ ಸಾರಿಗೆ ವಾಹನದೊಂದಿಗೆ ನಡೆಯಲಿದೆ.

ಮಾರ್ಗ ಮತ್ತು ವೇಳಾ ವಿವರ: ಕೇರಳ ಪ್ಯಾಕೇಜ್ ವಿವರ: ಮಂಗಳೂರು ಬಸ್ ನಿಲ್ದಾಣ – ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ, ಕುಂಬ್ಳೆ ಶ್ರೀ ಅನಂತಪದ್ಮನಾಭ ದೇವಸ್ಥಾನ ಬೆಳಿಗ್ಗೆ 10.15 ರಿಂದ 11 ಗಂಟೆಯವರೆಗೆ, ಮಧೂರು ಶ್ರೀ ಮದನಂತೇಶ್ವರ, ಗಣಪತಿ ದೇವಸ್ಥಾನ 11.15 ರಿಂದ 12 ಗಂಟೆಯವರೆಗೆ, ಮಲ್ಲಾ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ 12.30ರಿಂದ1.30ರ ವರೆಗೆ (ಊಟದ ಸಮಯ) ನಂತರ ಕಾಂಞಗಾಡ್ ನಿತ್ಯಾನಂದ ಆಶ್ರಮ ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ, ಬೇಕಲ್ ಫೋರ್ಟ್, ಬೀಚ್ 4.15ರಿಂದ ಸಂಜೆ 6 ಗಂಟೆಯವರೆಗೆ ರಾತ್ರಿ 8 ಗಂಟೆಗೆ ಮಂಗಳೂರು ಬಸ್ ನಿಲ್ದಾಣ ತಲುಪಲಿದೆ.

ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ (ಊಟ ಉಪಹಾರ ಹೊರತು ಪಡಿಸಿ) ವಯಸ್ಕರಿಗೆ ರೂ.750 (ಕೇರಳ ರಾಜ್ಯದ ಎಂಟ್ರಿ ಟ್ಟಾಕ್ಸ್ 310 ರೂ. ಹಾಗೂ ಟೋಲ್ ದರ ರೂ 10ರೂ. ಒಳಗೊಂಡಂತೆ) ಮಕ್ಕಳಿಗೆ 700 ರೂ.ಗಳು (6 ವರ್ಷದಿಂದ 12 ವರ್ಷದವರಿಗೆ) ನಿಗಧಿಪಡಿಸಲಾಗಿದೆ.

ಮಂಗಳೂರಿನಿಂದ ಬೆಳಿಗ್ಗೆ 7ಕ್ಕೆ ಹೊರಟು ಪುತ್ತೂರು, ಸುಳ್ಯ (ಉಪಹಾರದ ಸಮಯ) ಮಾರ್ಗವಾಗಿ ಬೆಳಿಗ್ಗೆ 11 ಗಂಟೆಗೆ ಮಡಿಕೇರಿ ರಾಜಸೀಟ್ ನಂತರ 11.30ರಿಂದ 11.45ರ ವರೆಗೆ ರಾಜಸೀಟ್, ಅಬ್ಬಿಫಾಲ್ಸ್ ಮಧ್ಯಾಹ್ನ 2.30ರಿಂದ 3.15ರ ವರೆಗೆ ಅಬ್ಬಿಫಾಲ್ಸ್, ನಿಸರ್ಗಧಾಮ (ಊಟದ ಸಮಯ) ಸಂಜೆ 4.30ರಿಂದ 4.45ರ ವರೆಗೆ ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಸಂಜೆ 5.15ರಿಂದ 5.30ರ ವರೆಗೆ ಗೋಲ್ಡನ್ ಟೆಂಪಲ್, ಹಾರಂಗಿಡ್ಯಾಮ್, ನಂತರ ಸಂಜೆ 6.15ಕ್ಕೆ ಹಾರಂಗಿಡ್ಯಾಮ್ ನಿಂದ ಹೊರಟು ರಾತ್ರಿ 10.30ಕ್ಕೆ ಮಂಗಳೂರು ತಲುಪಲಿದೆ.

ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ (ಊಟ ಉಪಹಾರ ಹೊರತು ಪಡಿಸಿ) ವಯಸ್ಕರಿಗೆ 500ರೂ.ಗಳು ಹಾಗೂ ಮಕ್ಕಳಿಗೆ 450 ರೂ.ಗಳು (6 ವರ್ಷದಿಂದ 12 ವರ್ಷದವರಿಗೆ) ನಿಗಧಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆಗಳು: 7760990702, 7760990711, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ಸಂಖ್ಯೆ: 9663211553 ಮಂಗಳೂರು ಬಸ್ ನಿಲ್ದಾಣ ಸಂಖ್ಯೆ: 7760990720 ಸಂಪರ್ಕಿಸಬಹುದು. ಪ್ಯಾಕೇಜ್ ಪ್ರವಾಸಕ್ಕೆ www.ksrtc.in ಅಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರಾರಸಾಸನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.