ಕರಾವಳಿ

ಲೈಂಗಿಕ ದೌರ್ಜನ್ಯವೆಸಗಿದ ಆರೋಪ: ಕುಂದಾಪುರ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ..!

Pinterest LinkedIn Tumblr

ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ ವಿರುದ್ಧ ವೈದ್ಯೆಗೆ ಮಾನಸಿಕ, ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಕರ್ತವ್ಯಕ್ಕೆ ಹೊಸದಾಗಿ ಸೇರಿದ ವೈದ್ಯೆಗೆ ಕಳೆದ 8 ತಿಂಗಳಿನಿಂದ ವಾಟ್ಸಾಪ್‌ನಲ್ಲಿ ತಡರಾತ್ರಿ ನಿರಂತರ ಅಶ್ಲೀಲ ಚಾಟ್‌ಗಳನ್ನು ಮಾಡುತ್ತಾ, ಸ್ಟೇಟಸ್‌ನ ಫೋಟೊಗಳನ್ನು ಸೇವ್‌ ಮಾಡಿ ಅದಕ್ಕೆ ಅಶ್ಲೀಲ ಕಮೆಂಟ್‌ಗಳನ್ನು ಕಳುಹಿಸಿ, ದುಬಾರಿ ಹೊಟೇಲ್‌ಗೆ ಕರೆದೊಯ್ಯುತ್ತೇನೆ ಎಂದು ಕರೆಯುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಉದ್ಯೋಗ ಉಳಿಸಿಕೊಳ್ಳುವ ಸಲುವಾಗಿ ವೈದ್ಯೆ ಮಾನಕ್ಕೆ ಹೆದರಿ ಸುಮ್ಮನಿದ್ದರೂ, ಅವರ ಮೇಲೆ ಬೇರೆ ವೈದ್ಯರು, ಸಿಬಂದಿ ಜತೆ ಸಂಭಾಷಣೆ ನಡೆಸಿದ್ದಕ್ಕೆ ಕೆಟ್ಟಪದ ಪ್ರಯೋಗ ಮಾಡಿ ಸುಳ್ಳು ಅಪವಾದ ಹೇರಿ ತಲೆಗೆ ಕಟ್ಟಿದ್ದಾರೆ ಎಂದು ದೂರಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸ್‌ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

ಡಾ| ರಾಬರ್ಟ್‌ ರೆಬೆಲ್ಲೋ ಮೇಲೆ ಸಾರ್ವಜನಿಕರಿಂದ ಹಾಗೂ ಸಹ ಸಿಬಂದಿ, ವೈದ್ಯರಿಂದ ದೂರು ಬಂದ ಹಿನ್ನೆಲೆಯಲ್ಲಿ ನಡೆದ ತನಿಖೆ ಹಾಗೂ ಲೈಂಗಿಕ ದೌರ್ಜನ್ಯ ಕೇಸು ದಾಖಲಾದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಡಿಸಿ ಡಾ| ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ. ಕುಂದಾಪುರ ಆಸ್ಪತ್ರೆಗೆ ಡಾ| ಲತಾ ಅವರನ್ನು ವೈದ್ಯಾಧಿಕಾರಿಯಾಗಿ ನೇಮಿಸಿ ಆದೇಶಿಸಿದ್ದಾರೆ.

Comments are closed.