ಮಂಗಳೂರು : ವೈಭವದ ಮಂಗಳೂರೂ ದಸರಾ ನಡೆಯಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸೇರಿದಂತೆ ನಗರದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಂಡಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯಲಿರುವ ವೈಭವದ ದಸರಾ ಮಹೋತ್ಸವ ಈಗಾಗಲೇ ಆರಂಭಗೊಂಡಿದ್ದು, ಕ್ಷೇತ್ರದಲ್ಲಿ 9 ದಿನಗಳ ಕಾಲ ಗಣಪತಿ, ಶಾರದಾ ಮಾತೆ, ನವದುರ್ಗೆಯರು, ಆದಿಮಾಯೆಯ ಆರಾಧನೆ ನಡೆಯಲಿದೆ.
ದಸರಾ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹಾಗೂ ದಸರಾ ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರ ಅಲಂಕಾರಗಳು ಮನಸೆಳೆಯುತ್ತಿದೆ.
ಅಕ್ಟೋಬರ್ 3ರ ಬೆಳಗ್ಗೆ 11.15ಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಸುಂದರ ಕಲಾಕೃತಿಗಳೊಂದಿಗೆ ನಿರ್ಮಾಣವಾದ ಸಭಾಂಗಣದಲ್ಲಿ ಗಣಪತಿ, ಶಾರದಾಮಾತೆ, ನವದುರ್ಗೆಯರು, ಆದಿಮಾಯೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ವರ್ಷದಿಂದ ವರ್ಷಕ್ಕೆ ಪ್ರಸಿದ್ದಿ ಪಡೆಯುತ್ತಿರುವ ಮಂಗಳೂರು ದಸರಾಕ್ಕೆ ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಲಕ್ಷಾಂತರ ಜನ ಭೇಟಿ ನೀಡುತಿದ್ದಾರೆ.
ಕೊನೆಯ ದಿನವಾದ ಅಕ್ಟೋಬರ್ 13ರ ಸಂಜೆ 4 ಗಂಟೆಗೆ ವೈಭವದ ಮಂಗಳೂರು ದಸರಾ ಮೆರವಣಿಗೆಯ ಶೋಭಾಯಾತ್ರೆ ನಡೆಯಲಿದೆ.
Comments are closed.