ಮಂಗಳೂರು: ಒಬ್ಬ ವ್ಯಕ್ತಿ ಮೈತುಂಬಾ ಬಂಗಾರ ಧರಿಸುವ ಮೂಲಕ ಮಾತ್ರವಲ್ಲದೇ ತಮ್ಮ ಉತ್ತಮ ಸೇವಾ ಚಟುವಟಿಕೆಗಳ ಮೂಲಕ ಬಂಗಾರದ ಮನುಷ್ಯ ಎಂದೇ ಖ್ಯಾತಿ ಪಡೆದಿರುವ ಮೂಲತಹ ಕೇರಳದವರಾದರೂ ಮಂಗಳೂರಿನಲ್ಲಿ ತಮ್ಮ ಒಡನಾಡಿಗಳ ಜೊತೆ ಹಲವಾರು ವರ್ಷಗಳನ್ನು ಕಳೆದು ಇದೀಗ ತುಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಉದ್ಯಮಿ ಲಂಚುಲಾಲ್ ಕಡುಬಡವರ ಉದ್ಧಾರಕ್ಕಾಗಿ ಒಂದು ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.
“ಸುಮಾರು 5 ವರ್ಷಗಳ ಹಿಂದೆ ಸ್ಥಾಪಿಸಿರುವ ಅಸ್ತ್ರ ಅನ್ನುವ ಸಂಸ್ಥೆಯು ಇಂದು ಉದ್ಯಮದ ಜೊತೆಗೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಕ್ರಿಕೆಟ್, ಕಬಡ್ಡಿ ಇನ್ನಿತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಸಂಸ್ಥೆಯ ಲಾಭದ ಒಂದಂಶವನ್ನು ಸಮಾಜ ಸೇವೆಗಾಗಿ ಬಳಸುತ್ತಾ ಬಂದಿದ್ದೇವೆ.
ನಮ್ಮ ಸಂಸ್ಥೆಯು 5ನೇ ವರ್ಷ ಪೂರೈಸಿರುವ ಈ ದಿನಗಳಲ್ಲಿ ಸಮಾಜಕ್ಕಾಗಿ ವಿಶೇಷ ಕೆಲಸವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಡುಬಡವರಿಗಾಗಿ ಪ್ರಾಣಾಸ್ತ್ರ ಎಂಬ ಟ್ರಸ್ಟ್ ಮೂಲಕ ಈ ಸಂಸ್ಥೆ ಸಹಕರಿಸಲಿದೆ, ಇದರ ಜೊತೆಗೆ ಟ್ರಸ್ಟ್ ಹೆಸರಿನಲ್ಲಿ ನ.14ರಂದು ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದೇವೆ“ ಎಂದು ಸಂಸ್ಥೆಯ ಸಿಇಒ ಲಂಚುಲಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಇದೇ ಸಂದರ್ಭದಲ್ಲಿ ಸೌಹಾರ್ದಯುತವಾಗಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದ ಮೂರು ಬಡ ಕುಟುಂಬದ ಜೊಡಿಗೆ ಸಾಮೂಹಿಕ ಮದುವೆಯನ್ನು ಮಾಡಲು ನಿರ್ಧರಿಸಲಾಗಿದೆ. ಕಡುಬಡವರ ಮದುವೆಯ ಸಂಪೂರ್ಣ ಖರ್ಚು ಜೊತೆಗೆ ಐದು ಪವನ್ ಚಿನ್ನ ಮತ್ತು ಜೀವನ ನಿರ್ವಹಣೆಗೆ 50000 ರೂ. ಕೊಡಲಾಗುವುದು, ಹಿಂದೂ ಜೋಡಿ ಮುಂದೆ ಬಂದಿದ್ದು ಮುಸ್ಲಿಂ, ಕ್ರೈಸ್ತ ಜೋಡಿ ಅವರಾಗಿಯೇ ಮುಂದೆ ಬಂದಲ್ಲಿ ಖುಷಿಯ ವಿಚಾರ. ಬಡವರ ಹಿತಕ್ಕಾಗಿ ಸಮಾಜ ಸೇವೆಗಾಗಿ ಮಹತ್ತರ ಕಾರ್ಯದಲ್ಲಿ ನಮ್ಮ ಸಂಸ್ಥೆಯು ತೊಡಗಿಕೊಂಡಿದ್ದು ಇದಕ್ಕೆ ಜನರು ಸಹಕಾರ ನೀಡಬೇಕು“ ಎಂದು ಲಂಚುಲಾಲ್ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮೂಕಾರದ ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಚರಣ್ ರಾಜ್ ಬಂದ್ಯೋಡು ಮುಂತಾದವರು ಉಪಸ್ಥಿತರಿದ್ದರು.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
Comments are closed.