ಕರ್ನಾಟಕ

ಫಾಸ್ಟ್’ಟ್ರ್ಯಾಕ್ ಸ್ಮಾರ್ಟ್ ಸಿಟಿ ಸ್ಪರ್ಧೆಯಲ್ಲಿ 13 ನಗರ ಆಯ್ಕೆ : ಸ್ಪರ್ಧೆಯಲ್ಲಿ ಲಕ್ನೋ ಟಾಪ್ಪರ್

Pinterest LinkedIn Tumblr

Smart_city_mangalor

ನವದೆಹಲಿ,ಮೇ 24: ಕೇಂದ್ರ ಸರಕಾರದ ಉದ್ದೇಶಿತ 100 ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆಯ ಹಿನ್ನೆಲೆಯಲ್ಲಿ ಇಂದು ಎರಡನೇ ಸ್ಮಾರ್ಟ್ ನಗರಗಳ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ 13 ನಗರಗಳಿವೆ. ಕರ್ನಾಟಕವಷ್ಟೇ ಅಲ್ಲ ದಕ್ಷಿಣ ಭಾರತದ ಯಾವ ನಗರವೂ ಇದರಲ್ಲಿಲ್ಲ. ಫಾಸ್ಟ್’ಟ್ರ್ಯಾಕ್ ಸ್ಮಾರ್ಟ್ ಸಿಟಿ ಸ್ಪರ್ಧೆಯಲ್ಲಿ ಈ 13 ನಗರಗಳನ್ನು ಆಯ್ಕೆ ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಒಟ್ಟು 97 ನಗರಗಳು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಲಕ್ನೋ ಟಾಪ್ಪರ್ ಆಗಿ ಹೊರಹೊಮ್ಮಿದೆ.

ಎರಡನೇ ಪಟ್ಟಿಯ ಸ್ಮಾರ್ಟ್’ಸಿಟಿಗಳು:
1)ಲಕ್ನೋ, 2)ವಾರಂಗಲ್, 3)ಧರ್ಮಶಾಲಾ, 4)ಚಂಡೀಗಢ, 5)ರಾಯಪುರ, 6)ಕೋಲ್ಕತಾ ನ್ಯೂಟೌನ್, 7)ಭಾಗಲಪುರ್, 8)ಪಣಜಿ, 9)ಪೋರ್ಟ್’ಬ್ಲೇರ್, 10)ಇಂಫಾಲ್, 11)ರಾಂಚಿ, 12)ಅಗಾರ್ತಲಾ, 13)ಫರೀದಾಬಾದ್

ಇದೇ ಜನವರಿಯಲ್ಲಿ ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆಗೆ 20 ನಗರಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಕರ್ನಾಟಕದ ಬೆಳಗಾವಿ ಮತ್ತು ದಾವಣಗೆರೆಯೂ ಸೇರಿವೆ. ಈ ಪಟ್ಟಿ ಆಯ್ಕೆಗೆ ಮುನ್ನ ವಿವಿಧ ರಾಜ್ಯಗಳಿಂದ 97 ನಗರಗಳ ಹೆಸರು ನೀಡಲ್ಪಟ್ಟಿದ್ದವು. ಈ ನಗರಗಳಲ್ಲಿರುವ ಸೇವಾ ಮಟ್ಟ, ಮೂಲಭೂತ ಸೌಕರ್ಯ ಮೊದಲಾದ ವಿಷಯಗಳ ಆಧಾರದ ಮೇಲೆ 20 ನಗರಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಜನವರಿಯಲ್ಲಿ ಬಿಡುಗಡೆಯಾದ 20 ನಗರಗಳ ಮೊದಲ ಪಟ್ಟಿ:
ಭುವನೇಶ್ವರ್, ಪುಣೆ, ಜೈಪುರ, ಸೂರತ್, ಕೊಚ್ಚಿ, ಅಹ್ಮದಾಬಾದ್, ಜಬಲ್’ಪುರ್, ವಿಶಾಖಪಟ್ಟಣಂ, ಸೋಲಾಪುರ, ದಾವಣಗೆರೆ, ಇಂದೋರ್, ನ್ಯೂಡೆಲ್ಲಿ, ಕೊಯಮತ್ತೂರು, ಕಾಕಿನಾಡ, ಬೆಳಗಾವಿ, ಉದಯಪುರ, ಗುವಾಹಟಿ, ಚೆನ್ನೈ, ಲುಧಿಯಾನ ಮತ್ತು ಭೋಪಾಲ್.

ಮೊದಲ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ನಗರಗಳಲ್ಲಿ ಏನೇನು ನ್ಯೂನತೆಗಳಿವೆ ಎಂಬುದನ್ನು ಗಮನಿಸಿ ಎರಡನೇ ಸುತ್ತಿನ ಫಾಸ್ಟ್ ಟ್ರ್ಯಾಕ್ ಸ್ಕ್ರೀನಿಂಗ್’ಗೆ ಆಹ್ವಾನಿಸಲಾಯಿತು. 43 ಪ್ರಶ್ನೆಗಳಿಗೆ ಸ್ಮಾರ್ಟ್ ಉತ್ತರ ನೀಡಲು ಕೇಳಲಾಯಿತು. ಅದರಂತೆ 13 ನಗರಗಳನ್ನು ಆಯ್ಕೆ ಮಾಡಲಾಗಿದೆ.

ಮೋದಿಯವರ 100 ಸ್ಮಾರ್ಟ್ ಸಿಟಿ ಯೋಜನೆ ಪ್ರಕಾರ, 2016-17ರ ಅವಧಿಯಲ್ಲಿ 40 ಸ್ಮಾರ್ಟ್ ಸಿಟಿಗಳು ಹಾಗೂ 2017-18ರ ಅವಧಿಯಲ್ಲಿ ಉಳಿದ 40 ಸ್ಮಾರ್ಟ್’ಸಿಟಿಗಳನ್ನು ಯೋಜನೆಗೆ ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ.

Comments are closed.