ಕರ್ನಾಟಕ

ಪ್ರಿಯಕರನನ್ನು ನೋಡಲು ಬಂದು ಹಿಂತಿರುಗುತ್ತಿದ್ದ ದಲಿತ ಯುವತಿಯನ್ನು ಕಿಡ್ನಾಪ್ ಮಾಡಿ 2 ದಿನಗಳ ಗ್ಯಾಂಗ್‍ರೇಪ್

Pinterest LinkedIn Tumblr

gang rape

ಚಿಕ್ಕಬಳ್ಳಾಪುರ: ದಲಿತ ಯುವತಿ ಮೇಲೆ ಮೂವರು ಆಟೋ ಚಾಲಕರಿಂದ ನಿರಂತರವಾಗಿ 2 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರಿನಿಂದ ಚಿಕ್ಕಬಳ್ಳಾಪುರಕ್ಕೆ ತನ್ನ ಪ್ರೇಮಿಯ ಭೇಟಿಗಾಗಿ ದಲಿತ ಯುವತಿ ಬಂದಿದ್ದಳು. ಪ್ರಿಯಕರ ಗಿರೀಶ್‍ನನ್ನ ಭೇಟಿ ಮಾಡಿ ವಾಪಸ್ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಒಂಟಿಯಾಗಿ ನಿಂತಿದ್ದಾಗ ಶಿವು ಎಂಬ ಆಟೋ ಡ್ರೈವರ್ ಬಂದು ಈಕೆಯನ್ನ ಊರಿಗೆ ಬಿಡೋದಾಗಿ ಆಟೋ ಹತ್ತಿಸಿಕೊಂಡಿದ್ದಾನೆ. ಸ್ವಲ್ಪ ದೂರ ಆಟೋ ಹೋದ ಮೇಲೆ ತನ್ನ ಮತ್ತಿಬ್ಬರು ಸ್ನೇಹಿತರಾದ ಶಶಿಧರ್ ಹಾಗೂ ರಮೇಶ್ ಬಾಬುನನ್ನ ಕರೆಸಿಕೊಂಡಿದ್ದಾನೆ.

ಹೀಗೆ ಮೂವರು ಈಕೆಯನ್ನ ಕಿಡ್ನಾಪ್ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕಿ 2 ದಿನಗಳ ಕಾಲ ನಿರಂತರ ಅತ್ಯಾಚಾರವೆಸಗಿದ್ದಾರೆ. ದಿನ್ನೇಹೊಸಹಳ್ಳಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್ ಕಂಡು ಈ ಮೂವರು ಯುವತಿಯನ್ನ ಬಿಟ್ಟು ಪರಾರಿಯಾಗಿಲು ಯತ್ನಿಸಿದ್ರು. ಈ ವೇಳೆ ಆರೋಪಿಗಳನ್ನ ಹಿಡಿದು, ಯುವತಿಯನ್ನ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತ ಯುವತಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಸದ್ಯಕ್ಕೆ ಸ್ವಾಂತ್ವನ ಕೇಂದ್ರವೊಂದರಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಸೀಮಂತ್‍ಕುಮಾರ್ ಸಿಂಗ್ ಹೇಳಿದ್ದಾರೆ.

ದಲಿತ ಪರ ಸರ್ಕಾರ ದಲಿತರ ರಕ್ಷಣೆಗೆ ಬದ್ದ ಅನ್ನೋ ಸರ್ಕಾರದಲ್ಲೇ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ಮಾತ್ರ ಕಮ್ಮಿಯಾಗಿಲ್ಲ. ಇದಕ್ಕೆ ಗೃಹ ಇಲಾಖೆಯೇ ಉತ್ತರಿಸಬೇಕಿದೆ.

Comments are closed.