ಕರ್ನಾಟಕ

ಕಡಿಮೆ ಖರ್ಚಲ್ಲಿ ಆರೋಗ್ಯ ಕಪಾಡಲು ಸರಳ ಸುಲಭ ಉಪಾಯ

Pinterest LinkedIn Tumblr

Healthy_life_photo

ಇಂದಿನ ಒತ್ತಡ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಲು ಕಷ್ಟದ ಕೆಲಸವೇ ಸರಿ. ತೂಕ ಅತೀ ಹೆಚ್ಚಾದರೆ ಹಲವು ರೋಗಗಳು ದೇಹಕ್ಕೆ ಆವರಿಸುತ್ತದೆ. ಈ ರೋಗಗಳನ್ನು ವಾಸಿ ಮಾಡಿಕೊಳ್ಳಲು ದುಡಿತ ಅರ್ಧ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇಲ್ಲಿ ನೀಡಿರುವ 10 ಸರಳ ಟಿಪ್’ಗಳನ್ನು ಚಾಚು ತಪ್ಪದೆ ಪಾಲಿಸುವುದರಿಂದ ತೂಕವನ್ನು ಇಳಿಸಿಕೊಳ್ಳುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

1) ಸಾಕಾಗುವಷ್ಟು ನಿದ್ರೆ ಮಾಡಿ : ನಿತ್ಯ ದಣಿದ ದೇಹಕ್ಕೆ ಅಗತ್ಯವಾದಷ್ಟು ನಿದ್ರೆ ಅತ್ಯಗತ್ಯ. 7ರಿಂದ 8ಗಂಟೆಗಳ ಕಾಲ ಆರಾಮದಾಯಕ ನಿದ್ರೆ ಮಾಡಿ. ಕಡಿಮೆ ನಿದ್ರೆ ಮಾಡಿದಷ್ಟು ನಿಮ್ಮ ದೇಹದ ತೂಕ ಹೆಚ್ಚಾಗುವ ಸಂಭವ ಹೆಚ್ಚು.
2) ಸರಿಯಾದ ಸಮಯಕ್ಕೆ ಆಹಾರ ಸೇವಿಸಿ, ಉಪವಾಸವಿರಬೇಡಿ : ಆಹಾರವನ್ನು ಹೊತ್ತಿಲ್ಲದ ಹೊತ್ತಿನಲ್ಲಿ ಸೇವಿಸುವ ಬದಲು ಕಡಿಮೆಯಾದರೂ ಸರಿಯೇ ನಿಗದಿತ ವೇಳೆಯಲ್ಲಿ ಸೇವಿಸಿ. ಒಂದು ಹೊತ್ತಿನಲ್ಲಿ ಉಪವಾಸವಿದ್ದು ಮತ್ತೊಂದು ಅವಧಿಗೆ ಹೆಚ್ಚು ಆಹಾರ ಸೇವಿದಿದರೆ ದೇಹದ ತೂಕದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.
3) ಸಕ್ಕರೆ ಅಂಶವಿರುವ ಆಹಾರ,ಪಾನೀಯ ಕಡಿಮೆ ಸೇವಿಸಿ : ಸಕ್ಕರೆ ಅಂಶವಿರುವ ಆಹಾರ ಹಾಗೂ ಪಾನೀಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಸಕ್ಕರೆ ಪ್ರಮಾಣವಿರುವ ಪದಾರ್ಥಗಳು ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುತ್ತವೆ. ಅದು ಹಲವು ಕಾಯಿಲೆಗಳಿಗೂ ದಾರಿ ಮಾಡಿಕೊಡುತ್ತದೆ.
4) ಕಠಿಣ ವ್ಯಾಯಾಮಕ್ಕಿಂತ ಸರಳ ವ್ಯಾಯಾಮ ಲೇಸು : ಜಿಮ್, ಕರಾಟೆ ಹಾಗೂ ಯೋಗಾಭ್ಯಾಸಗಳು ಕಠಿಣ ಹಾಗೂ ವೆಚ್ಚದಾಯಕ. ಇವುಗಳ ಬದಲು ಜಾಗಿಂಗ್, ನಡಿಗೆ, ಏರೋಬಿಕ್ಸ್ ತರಹ ಕಠಿಣ ವ್ಯಾಯಾಮ ಸೈಕಲ್’ನಲ್ಲಿ ಸುತ್ತುವುದು. ಇವು ನಿಮ್ಮ ತೂಕದಲ್ಲಿ ಗಮನಾರ್ಹ ಬದಲಾವಣೆ ತರುತ್ತವೆ.
5) ವಾರದ ಒಂದು ದಿನ ತರಕಾರಿ ಹಣ್ಣುಗಳಿಗೆ ಮೀಸಲಿಡಿ : ವಾರದಲ್ಲಿ ಒಂದು ದಿನವನ್ನು ಊಟದ ಬದಲು ತರಕಾರಿ ಹಾಗೂ ಹಣ್ಣುಗಳಿಗೆ ಮೀಸಲಿಡಿ.ಇವುಗಳನ್ನು ಸೇವಿಸುವಾಗ ಆದಷ್ಟು ಕೊಬ್ಬಿನ ಪ್ರಮಾಣ ಕಡಿಮೆಯಿರುವುದನ್ನು ಆಯ್ದುಕೊಳ್ಳಿ.
6) ಹೆಚ್ಚು ನೀರನ್ನು ಕುಡಿಯಿರಿ : ನೀರು ನಿಮ್ಮ ದೇಹಕ್ಕೆ ಸದಾ ಆರೋಗ್ಯಕರ. ಹೆಚ್ಚು ಹೆಚ್ಚು ನೀರು ಕುಡಿದರೆ ನಿಮ್ಮ ದೇಹದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗಿ ದೇಹ ಶಕ್ತಿಶಾಲಿಯಾಗುತ್ತದೆ. ನಿತ್ಯ 4 ರಿಂದ 5 ಲೀಟರ್ ನೀರು ಕುಡಿಯುವುದು ಉತ್ತಮ.
7) ಮಸಾಲೆ ಪದಾರ್ಧಗಳು ಕಡಿಮೆಯಿರಲಿ ನಾರಿನಂಶಗಳು ಹೆಚ್ಚಿರಲಿ : ನೀವು ಸೇವಿಸುವ ಆಹಾರದಲ್ಲಿ ಮಸಾಲೆ ಪದಾರ್ಥಗಳು ಕಡಿಮೆಯಿರಲಿ. ನಾರಿನಂಶಗಳು ಹೆಚ್ಚಿರಲಿ. ನಾರಿನಂಶಗಳು ಕೊಬ್ಬಿನ ಪ್ರಮಾಣ ಕಡಿಮೆ ಮಾಡಿ ದೇಹವು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.
8) ಜಂಕ್’ಫುಡ್ ಕಡಿಮೆ ಮಾಡಿ ಮನೆಯ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ :ಜಂಕ್’ಫುಡ್’ಗಳನ್ನು ಆದಷ್ಟು ಕಡಿಮೆ ಮಾಡಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ. ತೂಕ ಹೆಚ್ಚಳಕ್ಕೆ ಜಂಕ್’ಫುಡ್ ಪ್ರಮುಖ ಕಾರಣ.
9) ಸದಾ ಚಟುವಟಿಕೆಯಿಂದಿರಿ ಒತ್ತಡಕ್ಕೊಳಗಾಗಬೇಡಿ : ಎಷ್ಟೇ ಒತ್ತಡದ ಸಂದರ್ಭ ಬಂದರೂ ಸದಾ ಚಟುವಟಿಕೆಯಿಂದಿರಿ. ನಗುಮುಖ ತೂಕದ ಜೊತೆಗೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿಯಾಗುತ್ತದೆ.
10) ಊಟದ ನಡುವೆ 5 ರಿಂದ 6 ಗಂಟೆ ಬಿಡುವು ನೀಡಿ : ಒಂದು ಹೊತ್ತಿನ ಊಟದ ನಂತರ ಮತ್ತೊಂದು ಹೊತ್ತಿನ ಊಟಕ್ಕೆ ಕನಿಷ್ಠ 5ರಿಂದ 6 ಗಂಟೆಗಳ ಕಾಲ ಬಿಡುವಿರಲಿ. ಈ ಸಂದರ್ಭದಲ್ಲಿ ಹಸಿವಾದಾಗ ಮಾತ್ರ ಆಹಾರ ಸೇವಿಸಿ. ಹಸಿವಿಲ್ಲದೆ ಊಟ ಮಾಡಿ ಮಾಡಿದರೆ ತೂಕ ಹೆಚ್ಚಾಗುವ ಸಾಧ್ಯೆ ಹೆಚ್ಚು

Comments are closed.