ಕರ್ನಾಟಕ

ಪೊಲೀಸರ ದಂಗೆಗೆ ಗಾಬರಿ ಬೇಡ-ಸಿಎಂ

Pinterest LinkedIn Tumblr

Police_cap_sಮೈಸೂರು,ಮೇ,26-ಕರ್ನಾಟಕ ಪೋಲಿಸರು ಅಶಿಸ್ತು ಪ್ರದರ್ಶಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಬೆಳಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜೂನ್ 4 ರಂದು ಪ್ರತಿಭಟನೆ ನಡೆಸಲು ಪೊಲೀಸರು ಕೈಗೊಂಡಿರುವ ನಿರ್ಧಾರ ನನ್ನ ಗಮನಕ್ಕೆ ಬಂದಿದೆ. ಪೊಲೀಸ್‌ರ ಬೇಡಿಕೆಗಳನ್ನು ಪರಿಶೀಲನೆ ಮಾಡಿ ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ನಮ್ಮ ಪೋಲಿಸರು ಪ್ರತಿಭಟನೆ ನಡೆಸುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಕೆಪಿಎಸ್‌ಸಿಗೆ ಅಧ್ಯಕ್ಷರಾಗಿ ಶಾಮ್ ಭಟ್ ರವರನ್ನು ನೇಮಕ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ವಿರೋಧ ಪಕ್ಷದವರು ಹಾಗೂ ಜಗದೀಶ್ ಶೆಟ್ಟರ್ ರವರು ಹೇಳುವುದೆಲ್ಲ ಸತ್ಯವೇ? ಎಂದು ಪ್ರಶ್ನಿಸಿದ ಅವರು ಈ ಸಂಬಂಧ ರಾಜ್ಯಪಾಲರು ಯಾವುದೇ ವರದಿಯನ್ನು ಕೇಳಿಲ್ಲ. ವಿನಾ ಕಾರಣ ಆರೋಪ ಮಾಡುವುದನ್ನು ಬಿಟ್ಟು ಸತ್ಯಾ ಸತ್ಯತೆ ಅರಿತು ಮಾತನಾಡುವುದು ಒಳ್ಳೆಯದು ಎಂದು ಛೇಡಿಸಿದರು.
ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಸಂಬಂಧ ದೆಹಲಿಗೆ ತೆರಳಿ ಹೈಕಮಂಡ್ ಜೊತೆ ಚರ್ಚಿಸುತ್ತೇನೆ. ಜೊತೆಗೆ ಸಂಪುಟ ಪುನರ್ ರಚನೆ ಬಗ್ಗೆಯೂ ಪ್ರಸ್ತಾಪ ಮಾಡುತ್ತೇನೆ. ಪ್ರಸ್ತುತ ನಮಗೆ ಬರ ನಿರ್ವಹಣೆ ಹಾಗೂ ಅಭಿವೃದ್ಧಿ ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ ಎಂದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೇಸ್ ಸೋಲಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಗೆ ಒಳ್ಳೆಯ ಭವಿಷ್ಯವಿದೆ. ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೆ ಇದು ಎಲ್ಲಾ ಪಕ್ಷಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.

Comments are closed.