ಬಾಲಿವುಡ್’ನ ಇರ್ಫಾನ್ ಖಾನ್, ಓಂಪುರಿ ಮುಂತಾದ ಹಲವಾರು ಮೇರುನಟರು ಹಾಲಿವುಡ್ ಸಿನೆಮಾಗಳಲ್ಲಿ ನಟಿಸಿರುವಾಗ ಕಿಂಗ್ ಖಾನ್ ಯಾಕೆ ಬಾಲಿವುಡ್’ನಲ್ಲಿ ನಟಿಸುವುದಿಲ್ಲ ಎಂಬ ಜಿಜ್ಞಾಸೆ ಅಭಿಮಾನಿಗಳಲ್ಲಿರುವುದು ಸಹಜ. ತಾನು ಏಕೆ ಹಾಲಿವುಡ್ ಸಿನೆಮಾಗಳಲ್ಲಿ ನಟಿಸುವುದಿಲ್ಲ ಎಂದು ಶಾರುಖ್ ಬಹಿರಂಗಪಡಿಸಿದ್ದಾರೆ.
ಕಿಂಗ್ ಖಾನ್ ಪ್ರಕಾರ ಅವರಿಗೆ ಹಾಲಿವುಡ್’ ಸಿನೆಮಾದಲ್ಲಿ ನಟಿಸುವಂತಹ ಪ್ರತಿಭೆಯಿಲ್ಲ, ಅದನ್ನು ಅಭಿಮಾನಿಗಳು ಕಟುವಾದ ಸ್ವವಿಮರ್ಶೆ ಎಂದೂ ಭಾವಿಸಬಹುದು.
ಎರಡನೆಯದಾಗಿ, ಕಿಂಗ್ ಖಾನ್ ತಮ್ಮನ್ನು ನಾಚಿಕೆ ಸ್ವಭಾವದವರೆಂದು ಹೇಳಿಕೊಂಡಿದ್ದಾರೆ. ಹೊಸಬರೊಂದಿಗೆ ಸಲೀಸಾಗಿ ನಟಿಸುವುದು ತನ್ನಿಂದ ಸಾಧ್ಯವಿಲ್ಲವೆಂದು ಬಾಲಿವುಡ್ ಬಾದಶಾಹ್ ಹೇಳುತ್ತಾರೆ.
ಮೂರನೆಯದಾಗಿ, ನಾನು ಭಾರತೀಯ, ಭಾರತೀಯ ಸಿನೆಮಾ ರಂಗಕ್ಕೆ ಕೊಡುಗೆ ನೀಡಬಯಸುತ್ತೇನೆ. ಆದುದರಿಂದ ಜಾಗತಿಕ ಪ್ರಭಾವವಿರುವ ಭಾರತೀಯ ಸಿನೆಮಾದಲ್ಲಿ ನಟಿಸುವುದೇ ನನ್ನ ಆದ್ಯತೆ ಎಂದು ಖಾನ್ ಹೇಳಿದ್ದಾರೆ.
Comments are closed.