ಕರ್ನಾಟಕ

ಪ್ರೇಮಿಗಳ ಬೆದರಿಸಿ ಪ್ರೇಯಸಿಯ ಮೇಲೆ ಐವರು ಯುವಕರಿಂದ ಸಾಮೂಹಿಕ ಅತ್ಯಾಚಾರ; ರಾಮನಗರ ಜಿಲ್ಲೆಯ ಕಗ್ಗಲಿಪುರದಲ್ಲಿನ ನಡೆದ ಹೀನ ಕೃತ್ಯ ತಡವಾಗಿ ಬೆಳಕಿಗೆ

Pinterest LinkedIn Tumblr

Gang-Rape

ಬೆಂಗಳೂರು: ಸ್ನೇಹಿತನ ಹುಟ್ಟುಹಬ್ಬ ಆಚರಣೆಗಾಗಿ ಕಗ್ಗಲಿಪುರಕ್ಕೆ ಹೋಗಿದ್ದ ರಾಜಾಜಿನಗರದ ಪ್ರೇಮಿಗಳನ್ನು ಬೆದರಿಸಿ ಪ್ರೇಯಸಿಯ ಮೇಲೆ ಐವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಕೃತ್ಯ ನಡೆಸಿದ ಕಗ್ಗಲಿಪುರದ ಶರತ್ ಯಾದವ್ (೨೨), ಹನುಮಂತರಾಜು (೨೪), ಉದಯ್‌ಕುಮಾರ್(೩೪), ಮನು (೨೫), ಹರೀಶ್ (೨೧)ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರ ನಿವಾಸಿಗಳಾದ ಪ್ರೇಮಿಗಳು ಮೇ ೧೪ರಂದು ರಾಮನಗರ ಜಿಲ್ಲೆಯ ಕಗ್ಗಲಿಪುರದಲ್ಲಿನ ಕಂಬಿಪುರ ಲೇಔಟ್‌ನಲ್ಲಿರುವ ಸ್ನೇಹಿತನ ಹುಟ್ಟುಹಬ್ಬಕ್ಕೆ ಹೋಗಿದ್ದರು.

ಹುಟ್ಟುಹಬ್ಬ ಆಚರಣೆಯ ನಂತರ ಅಂದು ರಾತ್ರಿ ಪ್ರೇಮಿಗಳು ಉಳಿದುಕೊಂಡಿದ್ದ ಸ್ನೇಹಿತನ ಒಂಟಿ ಮನೆಗೆ ನುಗ್ಗಿದ ಆರೋಪಿಗಳು ಇಬ್ಬರನ್ನು ಬೆದರಿಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅದನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಅಲ್ಲದೇ ದುಷ್ಕರ್ಮಿಗಳು ಯುವಕನನ್ನು ಬೆದರಿಸಿ ಆತನಿಂದ ೨೧ ಗ್ರಾಮ್ ಚಿನ್ನದ ಸರ ದೋಚಿದ್ದಾರೆ.ಆರೋಪಿಗಳು ಬೆದರಿಕೆ ಹಾಕಿದ್ದರಿಂದ ಪ್ರೇಮಿಗಳು ಆರಂಭದಲ್ಲಿ ದೂರು ದಾಖಲಿಸಿರಲಿಲ್ಲ. ನಂತರ ಮೇ ೨೫ರಂದು ಈ ಸಂಬಂಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕಗ್ಗಲಿಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ,ಆದರೆ ಕೃತ್ಯದ ವಿಡಿಯೋ ಚಿತ್ರೀಕರಣದ ನಡೆಸಿರುವುದನ್ನು ಪೊಲೀಸರು ನಿರಾಕರಿಸಿದ್ದಾರೆ.

Comments are closed.