ಕರ್ನಾಟಕ

ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಭಾರತದಲ್ಲಿ ಶೇ.30 ರಷ್ಟು ಭಾರಿ ಹೆಚ್ಚಳ

Pinterest LinkedIn Tumblr

2001-11ರ ಅವಧಿಯಲ್ಲಿ ಭಾರತದಲ್ಲಿ 5ರಿಂದ 19 ವರ್ಷ ಪ್ರಾಯದೊಳಗಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ. ಈ ಅಂಕಿ ಅಂಶಗಳನ್ನು ಧರ್ಮದ ಆಧಾರದಲ್ಲಿ ವಿಶ್ಲೇಷಿಸಿದಾಗ ಮುಸ್ಲಿಮ್ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳದ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ.

ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.44ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಮುಸ್ಲಿಮ್ ಬಾಲಕಿಯರ ಸಂಖ್ಯೆ ಶೇ.53ರಷ್ಟಿದೆ.
5ರಿಂದ 19 ವಯೋಮಿತಿಯಲ್ಲಿ, ಜೈನ್ ಸಮುದಾಯದಲ್ಲಿ ವಿದ್ಯಾರ್ಥಿ ಪ್ರಮಾಣ (ಶೇ.88) ಇತರ ಸಮುದಾಯಗಳಿಗಿಂತ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಶೇ.80 ವಿದ್ಯಾರ್ಥಿ ಪ್ರಮಾಣವಿರುವ ಕ್ರೈಸ್ತ ಸಮುದಾಯವಿದೆ. ಹಿಂದೂಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ಶೇ.73 ಆಗಿದ್ದರೆ, ಮುಸ್ಲಿಮರಲ್ಲಿ ಶೇ.63 ಆಗಿದೆ.

ಆದರೆ ಕ್ರೈಸ್ತ ಸಮುದಾಯದಲ್ಲಿ ನಿರುದ್ಯೋಗ ಅತೀ ಹೆಚ್ಚಿದೆಯೆಂದು ಅಂಕಿಅಂಶಗಳು ತಿಳಿಸುತ್ತವೆ. ಕಳೆದ ಜನಗಣತಿಯಲ್ಲಿ ಅತೀ ಹೆಚ್ಚು ಶಿಕ್ಷಿತರಾಗಿದ್ದ ಕ್ರೈಸ್ತರಲ್ಲಿ ಶೇ.26ರಷ್ಟು ನಿರುದ್ಯೋಗತೆ ಇದೆ.

Comments are closed.