ತುಮಕೂರು: ಕಳೆದ ಜೂನ್ 4 ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸಂಗನಹಳ್ಳಿಯಲ್ಲಿ ನಡೆದಿದ್ದ ಪಿಎಸ್‍ಐ ಗಿರೀಶ್ ಪತ್ನಿ ಪ್ರಪುಲ್ಲಾ ಕೊಲೆ ಪ್ರಕರಣವನ್ನು ಚೇಳೂರು ಪೊಲೀಸರು ಬೇಧಿಸಿದ್ದಾರೆ.
ಈ ಕೊಲೆಗೆ ಚಿತ್ರದುರ್ಗ ಜಿಲ್ಲೆಯ ಹೊಸುದರ್ಗ ಠಾಣೆ ಪಿಎಸ್‍ಐ ಗಿರೀಶ್ ಮತ್ತು ಪ್ರಪುಲ್ಲಾ ತಾಯಿ ಮಹಾದೇವಮ್ಮ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿದ್ದು, ಈಗ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ತಾಯಿ ಜೊತೆ ಪತಿ ಇದ್ದಿದ್ದನ್ನು ಕಣ್ಣಾರೆ ಕಂಡಿದ್ದ ಪ್ರಪುಲ್ಲಾ 2 ತಿಂಗಳ ಹಿಂದೆ ಪಿಎಸ್‍ಐ ಗಿರೀಶ್ ಜೊತೆ ಠಾಣೆಯಲ್ಲಿಯೇ ಜಗಳವಾಡಿಕೊಂಡು ತವರು ಮನೆ ಸಂಗನಳ್ಳಿಗೆ ಬಂದಿದ್ದಳು. ಮನೆಗೆ ಬಂದ ಪ್ರಪುಲ್ಲಾ ತಾಯಿ ಜೊತೆ ಜಗಳವಾಡಿ ಸಂಗನಹಳ್ಳಿಯಲ್ಲೇ ಏಕಾಂಗಿಯಾಗಿ ನೆಲೆಸಿದ್ದಳು.
ಈ ಮಧ್ಯೆ ತಮ್ಮ ಈ ಅಕ್ರಮ ಸಂಬಂಧವನ್ನು ಎಲ್ಲಿ ಬಯಲು ಮಾಡುತ್ತಾಳೋ ಎನ್ನುವ ಭಯದಿಂದ ಮಹಾದೇವಮ್ಮ ಮತ್ತು ಗಿರೀಶ್ ಪ್ರಪುಲ್ಲಳನ್ನು ಕೊಲೆ ಮಾಡಲು ಸ್ಕೆಚ್ ಹಾಕುತ್ತಾರೆ. ಈ ಸ್ಕೆಚ್‍ಗೆ ಪಂಚಾಯತ್ ಸದಸ್ಯ ಚಿದಾನಂದ ಸಾಥ್ ನೀಡುತ್ತಾನೆ. ಅದರಂತೆ ಜೂನ್ 4 ರ ರಾತ್ರಿ ಚಿದಾನಂದನ ಮನೆಗೆ ಪ್ರಪುಲ್ಲಾ ಊಟಕ್ಕೆ ಹೋಗಿ ಸ್ಕೂಟಿಯಲ್ಲಿ ವಾಪಾಸ್ ಬರುತ್ತಿರುವಾಗ ಸಂಗನಳ್ಳಿಯ ಮಾವಿನ ತೋಪಿನ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಕೊಲೆಗೆ ಸಹಕರಿಸಿದ ಹಿನ್ನೆಲೆಯಲ್ಲಿ ಚಿದಾನಂದನನ್ನು ಪೊಲೀಸರು ಈಗ ಬಂಧಿಸಿದ್ದಾರೆ.
Comments are closed.