ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾ ಬಿಡುಗಡೆಗೂ ಮುನ್ನ 200 ಕೋಟಿ ರು ಕಬಳಿಸಿದೆ. ರಜನಿಕಾಂತ್ ಸಿನಿಮಾಗಳೆಂದರೆ, ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅವರ ಸಿನಿಮಾಗಳಿಗೆ ಯಾವಾಗಲು ಡಿಮ್ಯಾಂಡ್ ಜಾಸ್ತಿ.
ಜುಲೈ 1 ರಂದು ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ‘ಕಬಾಲಿ’ ರಿಲೀಸ್ ಆಗಲಿದೆ. ಈ ಚಿತ್ರ ಬಿಡುಗಡೆಗೂ ಮೊದಲೇ ದಾಖಲೆಯ ಗಳಿಕೆ ಮಾಡಿದೆ. ಈ ಮೊದಲು ‘ಕಬಾಲಿ’ ಟೀಸರ್ ರಿಲೀಸ್ ಆಗಿ 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದು, ದಾಖಲೆಯಾಗಿತ್ತು. ಈಗ ಸಿನಿಮಾದ ಸ್ಯಾಟ್ ಲೈಟ್ ಹಕ್ಕು, ಡಿಸ್ಟ್ರಿಬ್ಯೂಷನ್ ರೈಟ್ಸ್ ನಿಂದ ಬರೋಬ್ಬರಿ 200 ಕೋಟಿ ರೂಪಾಯಿ ಗಳಿಸಿದೆ.
ಈಗಾಗಲೇ ‘ಕಬಾಲಿ’ ಹವಾ ಶುರುವಾಗಿದ್ದು, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 5000 ಸ್ಕ್ರೀನ್ ಗಳಲ್ಲಿ ಜುಲೈ 1 ರಂದು ‘ಕಬಾಲಿ’ ಅಬ್ಬರ ಆರಂಭವಾಗಲಿದೆ. ಜೂನ್ 11 ರಂದು ಕಬಾಲಿ ಸಿನಿಮಾ ಆಡಿಯೋ ಬಿಡುಗಡೆಯಾಗಲಿದೆ.
Comments are closed.