ಬೆಂಗಳೂರು: ಹರಕೆಯ ಹಿನ್ನೆಲೆಯಲ್ಲಿ ಜುಟ್ಟು ಬಿಟ್ಟಿದ್ದ ನರ್ಸರಿ ವಿದ್ಯಾರ್ಥಿಯ ಅಡ್ಮಿಷನ್ ಅನ್ನು ರದ್ದುಪಡಿಸಿದ ಘಟನೆ ಬಾಬೂಸಾ ಪಾಳ್ಯದಲ್ಲಿರುವ ಸೇಂಟ್ ವಿನ್ಸೆಂಟ್ ಪಲ್ಲೋಟಿ ಶಾಲೆಯಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಏನಿದು ಜುಟ್ಟು ಜಟಾಪಟಿ?
ಮಂಜುನಾಥ್, ರೂಪಾ ದಂಪತಿಯ ಮಗ ವಿಷ್ಣುಗೆ ಹರಕೆ ಹಿನ್ನೆಲೆಯಲ್ಲಿ ಕೂದಲು ಬಿಟ್ಟಿದ್ದರು. ಸೇಂಟ್ ವಿನ್ಸೆಂಟ್ ಪಲ್ಲೋಟಿ ಶಾಲೆಯಲ್ಲಿ ವಿಷ್ಣುವನ್ನು ಸೇರಿಸಲು ಹೋದಾಗ…ಕೂದಲನ್ನು ಕಟ್ ಮಾಡಿಸಬೇಕೆಂದು ಪ್ರಿನ್ಸಿಪಾಲ್ ಪೌಲ್ ಡಿಸೋಜಾ ಪೋಷಕರಿಗೆ ಸೂಚಿಸಿದ್ದರು.
ಜುಟ್ಟು ಕತ್ತರಿಸಿದರೆ ಮಗು ಸಾಯುತ್ತೆ…ಮಗುವಿಗೆ 5 ವರ್ಷವಾದ ಬಳಿಕ ಜುಟ್ಟು ಕತ್ತರಿಸುತ್ತೇವೆ ಎಂದು ಪೋಷಕರು ಸಮಜಾಯಿಷಿ ನೀಡಿದ್ದರು. ಜುಟ್ಟು ಕತ್ತರಿಸದಿದ್ದರೆ ಶಾಲೆಗೆ ಸೇರಿಸಿಕೊಳ್ಳಲು ಆಗಲ್ಲ ಎಂದು ಹೇಳಿರುವುದಾಗಿ ಪೋಷಕರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿನ್ಸಿಪಾಲ್ ಪೌಲ್, ಇಲ್ಲ ನಾವು ಅಡ್ಮಿಷನ್ ಮಾಡಿಕೊಳ್ಳಲ್ಲ ಅಂತ ಹೊರಹಾಕಿಲ್ಲ. ಜುಟ್ಟು ತೆಗೆದರೆ ಮಗು ಸಾಯುತ್ತೆ ಎಂದು ಹೇಳಿದರು. ಅದು ಮೂಢನಂಬಿಕೆ ಎಂದು ಹೇಳಿದ್ದೆ.ಹಾಗಾಗಿ ಎಲ್ಲಾ ಮಕ್ಕಳು ಶಿಸ್ತು ಪಾಲಿಸಬೇಕು. ಅದಕ್ಕಾಗಿ ಜುಟ್ಟು ಕತ್ತರಿಸಿಕೊಂಡು ಬರಬೇಕು ಎಂದು ತಿಳಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ ಜುಟ್ಟು ಕತ್ತರಿಸಲ್ಲ ಎಂದು ಹಠ ಹಿಡಿದಿರುವ ಪೋಷಕರು ಅಲ್ಲೇ ಅಡ್ಮಿಷನ್ ಮಾಡಿಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.
-ಉದಯವಾಣಿ
Comments are closed.