ಕರ್ನಾಟಕ

ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

Pinterest LinkedIn Tumblr

viಬೆಂಗಳೂರು, ಜೂ.18- ವೈದ್ಯಕೀಯ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಬಿಕ್ಕಟ್ಟು ಬಗೆಹರಿದಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಯಡಿ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಬಯಸಿದ್ದ ಅಭ್ಯರ್ಥಿಗಳಿಗೆ ಇಲ್ಲಿದೆ ಸಿಹಿಸುದ್ದಿ. ಈ ವರ್ಷ ಖಾಸಗಿ ಕಾಲೇಜುಗಳು ಶೇ.40ರಷ್ಟು ಸೀಟುಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಒಪ್ಪಿವೆ. ಅದಕ್ಕೆ ಪ್ರತಿಯಾಗಿ ಸರ್ಕಾರ ಶೇ.10ರಷ್ಟು ಶುಲ್ಕ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿದೆ. ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟದ ಮಾಹಿತಿ ಪ್ರಕಾರ, ಸಿಇಟಿ ವಿದ್ಯಾರ್ಥಿಗಳಿಗೆ ಸೀಟು ನೀಡಲು ಮ್ಯಾನೇಜ್ ಮೆಂಟ್ ಕಾಲೇಜುಗಳು ಒಪ್ಪಿಕೊಂಡಿವೆ. ಇಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿವೆ.

ವೈದ್ಯಕೀಯ ಶಿಕ್ಷಣ ಸಚಿವರ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಸೀಟು ಹಂಚಿಕೆ ಪ್ರಸ್ತಾಪವನ್ನು ನಾವು ಒಪ್ಪಿಕೊಂಡಿದ್ದೇವೆ.ಅದಕ್ಕೆ ಪ್ರತಿಯಾಗಿ ನಾವು ವೈದ್ಯಕೀಯ ಕೋರ್ಸ್ ಶುಲ್ಕ ಹೆಚ್ಚಳ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದೇವೆ ಎಂದು ಮೂಲಗಳು ತಿಳಿಸಿವೆ. ಈ ಮೊದಲು ಸರ್ಕಾರ ಮತ್ತು ಖಾಸಗಿ ಕಾಲೇಜುಗಳು ನಡೆಸಿದ ಒಪ್ಪಂದದಂತೆ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಅದರ ಜೊತೆಗೆ ಈಗ ಮತ್ತೆ ಶೇ.10ರಷ್ಟು ಶುಲ್ಕ ಹೆಚ್ಚಿಸಲಾಗುತ್ತಿದೆ. ಇವೆರಡೂ ಸೇರಿ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ಈ ಒಪ್ಪಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ಒಕ್ಕೂಟದ ಸದಸ್ಯರು ನಮ್ಮ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ನಾನೀಗ ಬೆಂಗಳೂರಿನಲ್ಲಿಲ್ಲ. ಅವರು ನಮ್ಮ ಪ್ರಸ್ತಾವಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಡ್ಡು ಹೊಡೆದಿದ್ದರು:
ಕರ್ನಾಟಕ ವೃತ್ತಿಪರ ಕಾಲೇಜುಗಳು ಸಂಘದ ಅಧ್ಯಕ್ಷ ಎಂ.ಆರ್. ಜಯರಾಮ್ ಅವರು, ದೇಶದಲ್ಲಿ ವೈದ್ಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ದೇಶದಲ್ಲಿ ಏಕರೂಪದ ಪರೀಕ್ಷೆ ನೀಟ್ ಜರಿಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಆದೇಶದಂತೆ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ರಾಜ್ಯ ಸರ್ಕಾರದೊಂದಿಗೆ ಯಾವುದೇ ಸೀಟ್ ಗಳನ್ನು ಹಂಚಿಕೆ ಮಾಡಿಕೊಳ್ಳದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಇದರಂತೆ 700 ವೈದ್ಯಕೀಯ ಮತ್ತು 700 ದಂತ ವೈದ್ಯಕೀಯ ಸೀಟ್‌ಗಳು ರಾಜ್ಯ ಸರ್ಕಾರ ಪಾಲಿಗೆ ಬರುವುದಿಲ್ಲ. ಈ ಸೀಟ್ ಗಳನ್ನು ಸಿಇಟಿ ರ್ಯಾಂ ಕ್‌ಗಳ ಆಧಾರದ ಕರ್ನಾಟಕದ ವಿದ್ಯಾರ್ಥಿಗಳನ್ನು ಭರ್ತಿ ಮಾಡಲಾಗುತ್ತದೆ. ಶೇ.15ರಷ್ಟು ಸೀಟ್ ಗಳು ಎನ್‌ಆರ್ ಕೋಟಾಗೆ ಹೋಗಲಿದೆ. ಇನ್ನುಳಿದ ಶೇ.85ರಷ್ಟು ಸೀಟ್ ಗಳು ನೀಟ್ ರ್ಯಾಂಕ್ ನ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು. ಸೀಟುಗಳ ಭರ್ತಿಯಲ್ಲಿ ರಾಜ್ಯ ಕೋಟಾ ಅಥವಾ ಸರ್ಕಾರೀ ಕೋಟಾಗಳಾವುದು ನಮ್ಮ ಸಂಸ್ಥೆಗಳಲ್ಲಿ ಬರುವುದಿಲ್ಲ ಎಂದಿದ್ದರು.

ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಪ್ರವೇಶ ಮತ್ತು ಶುಲ್ಕ ನಿರ್ಧಾರ) ಕಾಯ್ದೆ-2016ರ ಅಡಿಯಲ್ಲಿ ಕಾಲೇಜುಗಳ ಶುಲ್ಕವನ್ನು ಒಪ್ಪಂದಂತೆ ಅಥವಾ ಶುಲ್ಕ ನಿಗದಿಪಡಿಸುವ ಸಮತಿಯ ವರದಿಯಾಧಾರದಲ್ಲಿ ನಿಗದಿಪಡಿಸಲಾಗುತ್ತದೆ. ಇನ್ನು ನೀಟ್ ಆದೇಶದಲ್ಲಿ ಈ ಹಿಂದಿದ್ದ ಒಪ್ಪಂದಗಳು ಮಾನ್ಯತೆಯಲ್ಲಿದೆಯೋ, ಇಲ್ಲವೋ ಎಂಬುದನ್ನು ಸ್ಪಷ್ಟನೆ ಪಡಿಸಿಲ್ಲ. ಪ್ರಸ್ತುತ ಖಾಸಗಿ ಕಾಲೇಜುಗಳು ತೆಗೆದುಕೊಂಡಿರುವ ನಿರ್ಧಾರಕ್ಕೆ ಶುಲ್ಕ ಪಟ್ಟಿಯಿಂದಲೇ ಆಗಿದೆ. ಒಂದು ವೇಳೆ ಖಾಸಗಿ ಕಾಲೇಜುಗಳು ಸಮಿತಿ ವರದಿಯಂತೆ ನಡೆಯಲು ತೀರ್ಮಾನಿಸಿದ್ದರೆ, ಸಮತಿಯ ವರದಿಯನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದರು.

Comments are closed.