ಕರ್ನಾಟಕ

ಸ್ಮಾರ್ಟ್‌ಸಿಟಿ: ಪ್ರತಿಕ್ರಿಯೆಗಳ ಮಹಾಪೂರ

Pinterest LinkedIn Tumblr

smartಬೆಂಗಳೂರು: ಕೇಂದ್ರದ ಸ್ಮಾರ್ಟ್‌ಸಿಟಿ ಯೋಜನೆ ಪಟ್ಟ ಗಿಟ್ಟಿಸಲು ಶತಪ್ರಯತ್ನ ನಡೆಸುತ್ತಿರುವ ಬಿಬಿಎಂಪಿಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಲು ಕೇವಲ ಐದು ದಿನ ಮಾತ್ರ ಬಾಕಿ ಉಳಿದಿದೆ.

ಈ ಸಂಬಂಧ 9 ಮಾಧ್ಯಮಗಳ ಮೂಲಕ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವ ಬಿಬಿಎಂಪಿಗೆ ಈವರೆಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಬಹುತೇಕರು ಸಮಸ್ಯೆಗಳ ಬಗ್ಗೆಯೇ ದೂರುಗಳನ್ನು ಹಂಚಿಕೊಂಡಿದ್ದಾರೆ. ಸಲಹೆ ನೀಡಿರುವವರ ಸಂಖ್ಯೆ ಕಡಿಮೆಯಿದೆ. ಗುರುವಾರ ಬೆಳಗ್ಗೆ ಟೌನ್‌ಹಾಲ್‌ನಲ್ಲಿ ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು ಹಾಗೂ ನಾಗರಿಕರ ಸಭೆ ನಡೆಯಲಿದ್ದು, ಇಲ್ಲಿ ನಗರಾಭಿವೃದ್ಧಿ ಕುರಿತು ಸಲಹೆ-ಮಾರ್ಗದರ್ಶನ ಪಡೆಯಲಾಗುವುದು. ಜೂ. 27ರವರೆಗೆ ಅಭಿಪ್ರಾಯ ಸಂಗ್ರಹಿಸಿ ಜೂ. 28ರಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ವರದಿ ಸಲ್ಲಿಕೆ ಮಾಡಲಿದೆ. ಜೂ. 30ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಮಾಹಿತಿ ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಸ್ಮಾರ್ಟ್‌ಸಿಟಿ ಕುರಿತ ಜನರ ಅಭಿಪ್ರಾಯಗಳನ್ನು ಸಲ್ಲಿಸಬೇಕಿದೆ.

ಯಾವ ವಾರ್ಡ್‌ಗೆ 1 ಸಾವಿರ ಕೋಟಿ?: ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಗೆ ನಗರ ಆಯ್ಕೆಯಾದರೆ ಕೇಂದ್ರದ ಪಾಲು 500 ಕೋಟಿ, ರಾಜ್ಯ ಸರ್ಕಾರದ ಪಾಲು 500 ಕೋಟಿ ಸೇರಿ ಒಟ್ಟು 1 ಸಾವಿರ ಕೋಟಿ ರೂ. ಅನುದಾನ ಬಿಬಿಎಂಪಿ ವ್ಯಾಪ್ತಿಗೆ ಹರಿದುಬರಲಿದೆ. ಆದರೆ, ಒಂದು ಸಾವಿರ ಕೋಟಿಯನ್ನೂ ಕೇವಲ 500 ಎಕರೆ ಪ್ರದೇಶದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಬೇಕು. ಹೀಗಾಗಿ ಯಾವ ವಾರ್ಡ್‌ಗೆ ಸಾವಿರ ಕೋಟಿ ರೂ.
ಹರಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ಆಯ್ಕೆ ಮಾಡುವುದರಿಂದ ಆಯಾ ವಾರ್ಡ್‌ ಸದಸ್ಯರು ತೀವ್ರ ಆಸಕ್ತಿ ವಹಿಸಿ ಸಾರ್ವಜನಿಕರಿಂದ ಫೇಸ್‌ಬುಕ್‌, ಟ್ವೀಟರ್‌, ವಾಟ್ಸಾéಪ್‌, ಈಮೇಲ್‌, ಸ್ಮಾಟ್‌ಸಿಟಿ ಬೆಂಗಳೂರು ಮೊಬೈಲ್‌ ಅಪ್ಲಿಕೇಷನ್‌ ಸೇರಿದಂತೆ ಒಟ್ಟು 9 ಮಾಧ್ಯಮಗಳ ಮೂಲಕ ಅಭಿಪ್ರಾಯ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಕೆಲವು ಪ್ರದೇಶದ ಬಗ್ಗೆ ಒಲವು: ಈಗಾಗಲೆ ಸಾವಿರಾರು ಜನರು ಪಾಲಿಕೆಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರಂತೆ ಮಹದೇವಪುರ, ಜಯ ನಗರ, ಬಸವನಗುಡಿ, ಮಲ್ಲೇಶ್ವರದಲ್ಲಿ ಸ್ಮಾಟ್‌ ìಸಿಟಿ ಯೋಜನೆ ಜಾರಿಗೊಳಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಜೂನ್‌ 27 ಅಭಿಪ್ರಾಯ ತಿಳಿಸಲು ಅಂತಿಮ ದಿನವಾಗಿದ್ದು, ಅಷ್ಟರೊಳಗೆ ಜನರು ಅಭಿಪ್ರಾಯ ನೀಡಬೇಕಿದೆ.
-ಉದಯವಾಣಿ

Comments are closed.