ಬೆಂಗಳೂರು: ಹಲವರು ಯುವತಿಯರನ್ನು ನಂಬಿಸಿ ಮದುವೆಯಾಗಿ ಇನ್ನೊಂದು ಹುಡುಗಿಗೂ ಮೋಸ ಮಾಡಲು ಮುಂದಾಗಿದ್ದ ಭೂಪನಿಗೆ ಥಳಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಬಾವಿ 8ನೆ ಅಡ್ಡರಸ್ತೆ ನಿವಾಸಿ ವಜ್ರೇಶ್ ಎಂಬಾತ ಈ ಹಿಂದೆ ಮೂವರು ಯುವತಿಯರನ್ನು ಮದುವೆಯಾಗಿದ್ದಲ್ಲದೆ, ಎಂಟು ಮಂದಿಗೆ ಮೋಸ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಜ್ರೇಶ್ ಮಾತಿಗೆ ಮರುಳಾದ ಯುವತಿಯರು ಈತನಿಂದ ಮೋಸಕ್ಕೊಳಗಾಗಿದ್ದು, ಇದೀಗ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿರುವ ವಿಷಯ ತಿಳಿದ ಕೊನೆಯ ಹೆಂಡತಿ ಮನೆಯವರು ಇಂದು ಬೆಳಗ್ಗೆ ಈತನ ಮನೆಗೆ ದಾವಿಸಿ ಆತನಿಗೆ ಚೆನ್ನಾಗಿ ಥಳಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Comments are closed.