ಕರ್ನಾಟಕ

ಸಚಿವೆ ಉಮಾಶ್ರೀ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು

Pinterest LinkedIn Tumblr

umaತುಮಕೂರು: ಮಾಜೀ ಸಚಿವ ಹಾಲಪ್ಪರನ್ನು ಸಾರ್ವಜನಿಕ ಸಭೆಯೊಂದರಲ್ಲಿ ರೇಪಿಸ್ಟ್ ಕರೆದು ಎಂಬ ಆರೋಪದ ಮೇಲೆ ಸಚಿವೆ ಉಮಾಶ್ರೀ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಉಮಾಶ್ರಿ ಹಾಲಪ್ಪ ತನ್ನ ಸ್ನೇಹಿತನ ಹೆಂಡತಿ ಮೇಲೇ ಅತ್ಯಾಚಾರ ಮಾಡಿದ್ದಾರೆ, ಅವರೊಬ್ಬ ರೇಪಿಸ್ಟ್ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣವನ್ನು ಗಣನೆಗೆ ತೆಗೆದುಕೊಂಡ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಜುಲೈ 20ರಂದು ಹಾಜರಾಗಿ ತಮ್ಮ ಹೇಳಿಕೆ ನೀಡಲು ಉಮಾಶ್ರೀ ಆದೇಶಿಸಿದೆ.

Comments are closed.