ಕರ್ನಾಟಕ

ತೆಲುಗು ನಟ ನಂದಮೂರಿ ಬಾಲಕೃಷ್ಣ ಕಾರು ಪಲ್ಟಿ :ನಟ ಆಸ್ಪತ್ರೆಗೆ ದಾಖಲು

Pinterest LinkedIn Tumblr

Balakrishna

ಬೆಂಗಳೂರು,ಜೂ.30: ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಪ್ರಯಾಣಿಸುತ್ತಿದ್ದ ಸಫಾರಿ ಕಾರು ಬಾಗೇಪಲ್ಲಿಯಲ್ಲಿ ಪಲ್ಟಿ ಹೊಡೆದಿದೆ.
ದೇವನಹಳ್ಳಿ ಏರ್ಪೋರ್ಟ್ಗೆ ತೆರಳುವಾಗ ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿ 7ರ ಪರಗೋಡು ಬಳಿ ಕಾರಿನ ಟೈರ್ ಸ್ಫೋಟಗೊಂಡು ಪಲ್ಟಿಯಾಗಿದೆ. ಗಾಯಗೊಂಡ ಬಾಲಕೃಷ್ಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಬಾಲಕೃಷ್ಣ ಅವರಿಗೆ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.