ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ರಿಲೀಸ್ಗೂ ಮೊದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಹೀಗಾಗಿ ಅಭಿಮಾನಿಗಳು ಚಿತ್ರದ ರಿಲೀಸ್ಗಾಗಿ ಕಾದುಕುಳಿತಿದ್ದಾರೆ. ಚಿತ್ರದ ಅಧಿಕೃತ ಏರ್ಲೈನ್ ಪಾಟ್ರ್ನರ್ ಆಗಿರುವ ಏರ್ಏಷ್ಯಾ ವಿಮಾನವೂ ಸಿದ್ಧವಾಗಿದೆ.
ಹೌದು. ಕಬಾಲಿ ರಿಲೀಸ್ ಡೇಟ್ ಇನ್ನೂ ಪ್ರಕಟವಾಗಬೇಕಿದೆ. ಹೀಗಾಗಿ ಏರ್ ಏಷ್ಯಾ ಕಬಾಲಿ ಚಿತ್ರದ ಅಧಿಕೃತ ಏರ್ಲೈನ್ ಪಾಟ್ರ್ನರ್ ಆಗಿರೋದ್ರಿಂದ ಬೆಂಗಳೂರಿನಿಂದ ಚೆನ್ನೈಗೆ ವಿಶೇಷ ವಿಮಾನ ಸಿದ್ಧಪಡಿಸಲಾಗಿದೆ. ಕಬಾಲಿ ಚಿತ್ರಕ್ಕಾಗಿ ವಿನ್ಯಾಸಗೊಳಿಸಿರುವ ಈ ವಿಮಾನ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದೆ.
ವಿಮಾನದ ಮೇಲೆ ಕಬಾಲಿ ಚಿತ್ರದ ಪೋಸ್ಟರ್ ಇದ್ದು, ರಜನಿ ಭಾವಚಿತ್ರವೂ ಇದೆ. ಅಲ್ಲದೇ ಅಕ್ಷರಗಳಲ್ಲಿ ಕಬಾಲಿ ಹಾಗೂ ರಜನಿ ಎಂದು ಬರೆಯಲಾಗಿದೆ. ಬಿಡುಗಡೆಯಾಗುವ ದಿನದಿಂದ ಈ ವಿಮಾನ ಹಾರಾಟ ಆರಂಭವಾಗಲಿದೆ. ಬೆಂಗಳೂರಿನಿಂದ ಚೆನ್ನೈಗೆ ಈ ವಿಮಾನ ಪ್ರಯಾಣ ಮಾಡಲಿದ್ದು, 7 ಸಾವಿರ ರೂಪಾಯಿ ಪ್ರಯಾಣ ದರ ನಿಗದಿ ಮಾಡಲಾಗಿದೆ. ಪ್ರಯಾಣ ದರ, ಫುಡ್, ಕಬಾಲಿ ಚಿತ್ರದ ಟಿಕೆಟ್, ಕಬಾಲಿ ಆಡಿಯೋ ಡಿವಿಡಿ ಎಲ್ಲವೂ ಈ ಪ್ರಯಾಣದಲ್ಲಿ ಸಿಗಲಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಚಿತ್ರವೊಂದರ ಪ್ರಮೋಷನ್ ಮಾಡಲಾಗ್ತಿದೆ. ಈ ಹಿಂದೆ ಹಾಲಿವುಡ್ನ ಹಾಬಿಟ್ ಫಿಲ್ಮ್ಗೆ ಈ ರೀತಿ ಪ್ರಮೋಷನ್ ಮಾಡಲಾಗಿತ್ತು. ಅಲ್ಲದೇ ಈ ವಿಮಾನದಲ್ಲಿ ಪ್ರಯಾಣ ಬೆಳೆಸಿ ಫಸ್ಟ್ ಡೇ ಫಸ್ಟ್ ಷೋ ನೀವು ಚೆನ್ನೈನಲ್ಲಿ ನೋಡಬಹುದಾಗಿದೆ.
Comments are closed.