ಚಿಕ್ಕಬಳ್ಳಾಪುರ: ಯುವತಿಗೆ ಮೊಬೈಲ್ ಮೂಲಕ ಅಶ್ಲೀಲ ಮೇಸೆಜ್ ಮಾಡಿದ ಯುವಕನೊರ್ವನಿಗೆ ಯುವತಿ ಹಾಗೂ ಆಕೆಯ ಸ್ನೇಹಿತರು ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕಬನಗರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಳಿಯ ರೂರಲ್‍ಶೋರ್ಸ್ ಕಾಲ್‍ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ಥಳಿತಕ್ಕೊಳಗಾದ ಯುವಕ. ಅಂದ ಹಾಗೆ ನಂದೀಶ ಯುವತಿ ಶಿಲ್ಪಾ ಮೊಬೈಲ್‍ಗೆ ಹುಡುಗಿ ಬೇಕು ರೇಟ್ ಎಷ್ಟು ಅಂತ ಅಶ್ಲೀಲವಾದ ಸಂದೇಶ ರವಾನಿಸಿದ್ದಾನೆ. ಅಲ್ಲದೇ ಈ ಬಗ್ಗೆ ಕೇಳಿದ್ರೇ ಏನ್ ಮಾಡ್ಕೋತಿಯೋ ಮಾಡ್ಕೋ ಅಂತ ಯುವತಿಗೆ ಧಮ್ಕಿ ಹಾಕಿದ್ದಾನಂತೆ.
ಇದ್ರಿಂದ ಕೆರಳಿದ ಯುವತಿ ಯುವಕನನ್ನ ಚೆನ್ನಾಗಿ ಥಳಿಸಿದ್ದಾಳೆ. ಪೆಟ್ಟು ತಿಂದ ಮೇಲೆ ಆತ ಯುವತಿಯ ಕಾಲಿಗೂ ಬಿದ್ರು ಬಿಟ್ಟಿಲ್ಲ ಸರಿಯಾಗಿ ಥಳಿಸಿದ್ದಾಳೆ. ಸದ್ಯ ಆರೋಪಿ ನಂದೀಶ್‍ನನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Comments are closed.