ನವದೆಹಲಿ: ಸಿಲಿಕಾನ್ ಸಿಟಿ ಬೆಂಗಳೂರಿಗೂ ಸ್ಮಾರ್ಟ್ ಸಿಟಿ ಭಾಗ್ಯ ದೊರೆಯುತ್ತಿದ್ದು, ರಾಜಕೀಯ ಕಾರಣಗಳಿಗಾಗಿ ಬೆಂಗಳೂರು ಸೇರಿದಂತೆ ಮತ್ತೆ 9 ನೂತನ ನಗರಳನ್ನು ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇದರೊಂದಿಗೆ ಉದ್ದೇಶಿತ ಸ್ಮಾರ್ಟ್ ಸಿಟಿಗಳ ಸಂಖ್ಯೆ ಈಗ 109ಕ್ಕೆ ಏರಿದೆ.
ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಸೇರ್ಪಡೆಯಾಗಲು ಮುಂದಿನ ಹಂತದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಬೆಂಗಳೂರು, ಪಟನಾ, ತಿರುವನಂತಪುರಂ, ಅಮರಾವತಿ, ಇಟಾನಗರ್ ಹಾಗೂ ಗ್ಯಾಂಗ್ಟಕ್ ನಗರಗಳು ಭಾಗವಹಿಸಬಹುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ.
ಈವರೆಗೆ ರಾಜ್ಯ ರಾಜಧಾನಿ ಬೆಂಗಳೂರು ಸ್ಮಾರ್ಟ್ಸಿಟಿ ಯೋಜನೆಯಿಂದ ಹೊರಗಿತ್ತು. ಜಮ್ಮು-ಕಾಶ್ಮೀರ ಮತ್ತು ಉತ್ತರ ಪ್ರದೇಶದ ಎರಡು ನಗರಗಳನ್ನು ಸೇರಿಸಲು ಅವಕಾಶ ನೀಡಿದ್ದಾರೆ. ಕರ್ನಾಟಕದಿಂದ ಈಗಾಗಲೇ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು ಮತ್ತು ದಾವಣಗೆರೆ ನಗರಗಳು ಪಟ್ಟಿಯಲ್ಲಿವೆ.
Comments are closed.