ಬೆಂಗಳೂರು,ಜುಲೈ.05 : ಹೊಸಕೋಟೆಯಲ್ಲಿ ವಿವಸ್ತ್ರಗೊಳಿಸಿ ಹಲ್ಲೆಗೊಳಗಾದ ಮೂವರು ಮಕ್ಕಳು ಹಾಗೂ ಪೋಷಕರಿಂದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸೋಮವಾರ ದೂರು ದಾಖಲು ನೀಡಲಾಗಿದೆ.
ಮಾಹಿತಿ ಪಡೇದ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವಾ, ಹೀಗೆ ಅಮಾನುಷವಾಗಿ ಹಲ್ಲೆ ಮಾಡಲು ಹಳೇ ದ್ವೇಷವೇ ಕಾರಣ. ಹಲ್ಲೆಗೊಳಗಾಗಿರುವ ಮಕ್ಕಳು ಈ ಹಿಂದೆ ಕ್ರಿಕೆಟ್ ಆಡುವಾಗ ಸದ್ಯ ಪ್ರಕರಣದ ಆರೋಪಿಯಾಗಿರುವ ನೂರುದ್ದೀನ್ ಮನೆಯ ಪಕ್ಕದಲ್ಲಿ ಬಾಲು ಬಿದ್ದಿದೆ. ಬಾಲ್ ತರಲು ಹೋದ ಯುವಕ ನೂರುದ್ದೀನ್ ಮನೆಯ ಕಾಂಪೌಂಡ್ ಹಾರಿ ಬಂದಿದ್ದಾನೆ. ಇದರಿಂದ ಕೋಪಗೊಂಡ ನೂರುದ್ದೀನ್ ಕುಟುಂಬಸ್ಥರು ಆ ಯುವಕನ ವಿರುದ್ಧ ಕಳ್ಳತನದ ಆರೋಪ ಹೊರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ನೂರುದ್ದೀನ್ ತನ್ನ ಸ್ನೇಹಿತರೊಡಗೂಡಿ ಅಂಗಡಿಯಲ್ಲಿ ಕಳವು ಮಾಡಿದ್ದೇವೆಂದು ನಮ್ಮನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆಂದು ಮಕ್ಕಳು ಆಯೋಗದ ಮುಂದೆ ಹೇಳಿಕೊಂಡಿದ್ದಾರೆ ಎಂದು ಆಳ್ವಾ ಮಾಹಿತಿ ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಊಟದ ಸಮಯದಲ್ಲಿ ಮಗು ಕಾಣೆಯಾದ ನಂತರ ತಕ್ಷಣ ಏಕೆ ಪೊಲೀಸ್ ಠಾಣೆಗೆ ದೂರು ನೀಡಲಿಲ್ಲ ಎಂಬ ಕಾರಣ ಕೇಳಿ ಮಂಗಳವಾರ ಶಾಲೆಗೆ ನೊಟೀಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಸೀದಿ ಸದಸ್ಯನಿಂದ ಬೆದರಿಕೆ:
ಹಲ್ಲೆಗೊಳ್ಳಗಾದ ಮಕ್ಕಳ ಪೋಷಕರಿಗೆ ಆರೋಪಿಗಳಲ್ಲೊಬ್ಬನ ತಂದೆ ದೂರು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಚಿಕಿತ್ಸೆಗಾಗಿ ಹಣ ನೀಡುತ್ತೇವೆ. ದೂರನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.
ಅಬ್ದುಲ್ ಅಜೀಜ್ ಎಂಬ ಬಾಲಕನ ಪೋಷಕರಿಗೂ ಕೂಡ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಒಪ್ಪದ ಅಜೀಜ್ ಪೋಷಕರು, ನಮ್ಮ ಮಕ್ಕಳು ಅನುಭವಿಸಿದ ನೋವನ್ನು ಅವರು ಅನುಭವಿಸಬೇಕು. ಸರಿಯಾದ ಶಿಕ್ಷೆಯಾಗಬೇಕೆಂದಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ತಿಳಿಸಿದ್ದಾರೆ.
ಮತ್ತಿಬ್ಬರ ಬಂಧನ
ಘಟನೆ ನಂತರ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ನೂರುದ್ದೀನ್ (24) ಹಾಗೂ ಆಸೀಫ್(25) ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.