ಕರ್ನಾಟಕ

ಶ್ರೀನಗರ ಕಿಟ್ಟಿ ಪುತ್ರಿ ಪರಿಣಿತಿ ಶಿವರಾಜ್ ಕುಮಾರ್ ಜೊತೆ “ಲೀಡರ್”ನಲ್ಲಿ ಅಭಿನಯ

Pinterest LinkedIn Tumblr

shivanna_shrngarakitty

ಬೆಂಗಳೂರು ಜು.07 : ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಲೀಡರ್ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ವಿಶೇಷ ಅಂದರೆ ನಟ ಶ್ರೀನಗರ ಕಿಟ್ಟಿ ಪುತ್ರಿ ಪರಿಣಿತಿ ಶಿವರಾಜ್ ಕುಮಾರ್ ಜೊತೆ ಅಭಿನಯಿಸುತ್ತಿದ್ಧಾರೆ. ಈ ಮೂಲಕ ಸಿನಿಮಾರಂಗಕ್ಕೆ ಕಿಟ್ಟಿ ಪುತ್ರಿ ಎಂಟ್ರಿಯಾಗುತ್ತಿದೆ.

ಶಿವರಾಜ್ ಕುಮಾರ್ ಮಗಳ ಪಾತ್ರಕ್ಕಾಗಿ ಚಿತ್ರ ತಂಡ ಮುದ್ದಾದ ಪುಟ್ಟ ಹುಡುಗಿಯನ್ನು ಹುಡುಕಾಡುತ್ತಿತ್ತು. ಈ ಸಂದರ್ಭದಲ್ಲಿ ಕಿಟ್ಟಿ ಮಗಳು ಕಣ್ಣಿಗೆ ಬಿದ್ದು ಲೀಡರ್ ಚಿತ್ರದ ಪಾತ್ರಕ್ಕೆ ಸೆಲೆಕ್ಟ್ ಮಾಡಲಾಗಿದೆ.

ಪರಿಣಿತಿ ಲೀಡರ್ ಚಿತ್ರದಲ್ಲಿ ಅಭಿನಯಿಸ್ತಿದ್ದು, ಚಿತ್ರದಲ್ಲಿ 50 ಭಾಗ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣ ಮತ್ತು ಪರಿಣಿತಿಯ ಫೋಟೋಶೂಟ್ ಮಾಡಲಾಗಿದ್ದು, ಅಪ್ಪ-ಮಗಳ ಬಾಂಧವ್ಯದ ಫೋಟೋಗಳು ಮೋಡಿ ಮಾಡುತ್ತಿವೆ. ಸಹನಾ ಮೂರ್ತಿ ನಿರ್ದೇಶನದಲ್ಲಿ ಲೀಡರ್ ಚಿತ್ರ ರೆಡಿಯಾಗ್ತಿದ್ದು.ತರುಣ್ ಶಿವಪ್ಪ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Comments are closed.