ಶಿರಾ: ನೀರು ಕುಡಿಯಲು ಕೃಷಿ ಹೊಂಡಕ್ಕೆ ತೆರಳಿದಾಗ ಕಾಲು ಜಾರಿ ಬಿದ್ದು ತಂದೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸಾಕಪ್ಪ (45) ಹಾಗೂ ಇವರ ಮಕ್ಕಳಾದ ನವೀನ್(15), ದರ್ಶನ್(13) ಮೃತ ದುರ್ದೈವಿಗಳು. ತಾಲ್ಲೂಕಿನ ಗೊಲ್ಲರಹಳ್ಳಿ ನಿವಾಸಿಯಾದ ಸಾಕಪ್ಪ ತಮ್ಮ ಜಮೀನಿನಲ್ಲಿ ತನ್ನಿಬ್ಬರು ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದರು. ಬಾಯಾರಿಕೆಯಿಂದ ಮಕ್ಕಳಿಬ್ಬರು ಅಲ್ಲೇ ಹತ್ತಿರವಿದ್ದ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದಾರೆ. ಈ ವೇಳೆ ಕಾಲು ಜಾರಿ ಬಿದ್ದು ಇಬ್ಬರೂ ನೀರಿನಲ್ಲಿ ಮುಳಿಗಿದ್ದಾರೆ. ಇದನ್ನು ಕಂಡ ತಂದೆ ಸಾಕಪ್ಪ ಅವರನ್ನು ರಕ್ಷಿಸಲು ಹೋಗಿ ಅವರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.
ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪಟ್ಟನಾಯಕನಹಳ್ಳಿ ಠಾಣೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Comments are closed.