ಕರ್ನಾಟಕ

ಸೂರ್ಯನ ರಶ್ಮಿಗೆ ತನ್ನ ಬಣ್ಣ ಬದಲಿಸುವ ಗಿರ್ಗಿಟ್ ಟಿ ಶರ್ಟ್ ಮಾರುಕಟ್ಟೆಗೆ.

Pinterest LinkedIn Tumblr

chang_colur_t-shirt_1

ನವದೆಹಲಿ:ಜುಲೈ ,15: ಮನೆಯಿಂದ ಹೊರಬಂದು ಸೂರ್ಯನ ರಶ್ಮಿಗೆ ನಿಂತಾಗ ಧರಿಸಿರುವ ಟಿ ಶರ್ಟ್ ಬಣ್ಣ ಮತ್ತು ಹೊಳಪು ಬದಲಾವಣೆಯಾಗುವಂತಹ ಸಿದ್ಧ ಉಡುಪುಗಳನ್ನು ನೀವು ನಿಮ್ಮ ನೆಚ್ಚಿನ ಟಿವಿ ವಾಹಿನಿಗಳಲ್ಲಿ ವೀಕ್ಷಿಸಿದ್ದೀರಿ. ಇಂತಹ ಉಡುಪುಗಳು ಸದ್ಯದಲ್ಲೇ ಮಾರುಕಟ್ಟೆ ಬಿಡುಗಡೆಯಾಗಲಿವೆ ಎಂದು ಗಿರ್ಗಿಟ್ ಸಂಸ್ಥಾಪಕ ಹಿಮಾಂಶು ಠಾಕೂರ್ ತಿಳಿಸಿದರು . ದೇಶೀಯ ನಿರ್ಮಿತವಾದ ಈ ಟಿ-ಶರ್ಟ್ಗಳಿಗೆ ‘ ಗಿರ್ಗಿಟ್ ‘ಎಂದು ಹೆಸರು. ವಾತಾವರಣಕ್ಕೆ ಅನುಗುಣವಾಗಿ ತನ್ನ ಬಣ್ಣ ಮತ್ತು ಹೊಳಪು ಬದಲಾವಣೆಯಾಗುವ ವೈಶಿಷ್ಟ್ಯತೆಯನ್ನು ಈ ಟಿ -ಶರ್ಟ್ಗಳು ಹೊಂದಿವೆ.

ಈ ಮ್ಯಾಜಿಕ್ ಟಿ-ಶರ್ಟ್ಗಳು ಬರೀ ಬಣ್ಣ ಬದಲಾಗುವುದೇ ಅಲ್ಲದೆ, ಟಿ-ಶರ್ಟ್ ಮೇಲೆ ವಿವಿಧ ಬಗೆಯ ಚಿತ್ರಗಳು ಮತ್ತು ಅದಕ್ಕೆ ಸಂಬಂಧಿಸಿದ ಸ್ಟೇಟಸ್ಗಳನ್ನು ಸಹ ಮುದ್ರಿಸಲಾಗಿರುತ್ತದೆ. ಇದರಿಂದ ನೋಡುಗರಿಗೆ ಹೆಚ್ಚು ಆಕರ್ಷಣೆಗೆ ಒಳಗಾಗಲಿದೆ.

chang_colur_t-shirt_2 chang_colur_t-shirt_3

ಇಂತಹ ಮ್ಯಾಜಿಕ್ ಟಿ-ಶರ್ಟ್ಗಳನ್ನು ನಾವು ಬರೀ ಸಿನಿಮಾಗಳಲ್ಲಿ ನೋಡಿದ್ದೇವೆಯಷ್ಟೇ. ಗಿರ್ಗಿಟ್ ಟಿ ಶರ್ಟ್ಗಳ ಸಂಸ್ಥಾಪಕರು ಜನರಿಗೆ ಪರಿಚಯಿಸುವ ಸಲುವಾಗಿ ಯುವ ಫ್ಯಾಷನ್ ಡಿಸೈನರ್ಗಳ ತಂಡದ ಸಹಾಯದಿಂದ ಗಿರ್ಗಿಟ್ ಟಿ-ಶಟ್ಗಳನ್ನು ಹೊಸದಾಗಿ ನೂತನ ಶೈಲಿಯಲ್ಲಿ ಡಿಸೈನ್ ಮಾಡಿದ್ದಾರೆ. ಈ ಟಿ-ಶಟ್ಗಳ ವೈಶಿಷ್ಟ್ಯತೆ ಏನೆಂದರೆ ಒಂದು ಖರೀದಿಸಿದರೆ, ಎರಡು ಖರೀದಿಸಿದಷ್ಟು ಅನುಭವವನ್ನು ಗಿರ್ಗಿಟ್ ಟಿ ಶರ್ಟ್ ನೀಡುತ್ತದೆ. ಬೆಲೆಯೂ ಸಹ ದುಬಾರಿಯೇನಲ್ಲ ಕೈಗೆಟಕುವ ರೀತಿಯಲ್ಲಿ ದರ ಸಮಂಜಸವಾಗಿದೆ ಎಂದು ಅವರು ತಿಳಿಸಿದರು.

ಯುವಕರನ್ನು ಮಾತ್ರ ಕೇಂದ್ರೀಕರಿಸಿಕೊಂಡು ತಯಾರು ಮಾಡಲಾದ ಟೀ-ಶಟ್ಗಳು ಬರೀ ಯುವಕರಿಗಷ್ಟೇ ಲಭ್ಯ. ಟಿ-ಶರ್ಟ್ ಧರಿಸಿದಾಗ ಗ್ರಾಹಕರಿಗೆ ಆರಾಮವಾದ ಅನುಭವವನ್ನು ನೀಡುತ್ತದೆ. ಟಿ-ಶರ್ಟ್ಗಳು ಎಲ್ಲಾ ಗಾತ್ರಗಳಲ್ಲಿ ಲಭ್ಯವಿದೆ.

Comments are closed.