ಕರ್ನಾಟಕ

ಭಾರತೀಯ ಪ್ರಾಚೀನ ಕಾಲದ ಅಡುಗೆ ಎಣ್ಣೆ ಬಳಕೆ ಸೂಕ್ತ : ಸಂಶೋಧರಕ ಅಭಿಪ್ರಾಯ

Pinterest LinkedIn Tumblr

coconut-oil

ಆಹಾರ ಪದಾರ್ಥಗಳಲ್ಲಿ ಭಾರತೀಯ ಪ್ರಾಚೀನ ಕಾಲದ ಅಡುಗೆ ಎಣ್ಣೆಯನ್ನೇ ಬಳಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಸಂಶೋಧಕರು ಬಂದಿದ್ದಾರೆ.ಪ್ರಾಚೀನ ಕಾಲದಿಂದಲೂ ಅಡುಗೆಗೆ ತುಪ್ಪ, ಕಡಲೆಕಾಯಿ, ತೆಂಗಿನ ಕಾಯಿ ಹಾಗೂ ಸಾಸಿವೆ ಎಣ್ಣೆಯನ್ನೇ ಬಳಸಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.

ಗಂಗಾರಾಂ ಆಸ್ಪತ್ರೆಯ ಹೃದಯರೋಗ ತಜ್ಞ ಡಾ.ಎಸ್ ಸಿ ಮಾನಚಂದ ಅವರು ಅಡುಗೆಗೆ ಹಿಂದೆ ಬಳಕೆಯಾಗುತ್ತಿದ್ದ ಎಣ್ಣೆಯನ್ನೇ ಬಳಸಲು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಸಂಸ್ಕರಿತ ಎಣ್ಣೆ ಬಳಕೆ ಹೆಚ್ಚಾಗಿದ್ದು, ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ನಮ್ಮ ಪಾರಂಪರಿಕ ಎಣ್ಣೆಯಿಂದ ಇಂದಿನ ಸಂಸ್ಕರಿತ ಎಣ್ಣೆ ಅಷ್ಟು ಆರೋಗ್ಯಕರವಲ್ಲ ಎಂಬುದು ಇವರ ವಾದ. ಸಂಸ್ಕರಿತ ಎಣ್ಣೆಯನ್ನು ಅತ್ಯಾಧುನಿಕ ತಾಪಮಾನ ನೀಡಲಾಗುತ್ತದೆ, ಇದರಿಂದ ವಿಷಕಾರಿ ಅಂಶಗಳು ಸೇರ್ಪಡೆಯಾಗಲಿದೆ ಆದ್ದರಿಂದ ಸಂಸ್ಕರಿತ ಎಣ್ಣೆ ಉಪಯೋಗ ಸರಿಯಲ್ಲ ಎಂದು ಸಂಶೋಧಕರು ವಾದಿಸಿದ್ದಾರೆ,

Comments are closed.