ಈ ಜಗತ್ತಿನಲ್ಲಿ ಎಲ್ಲಾದರೊಂದು ಕಡೆ ವಿಚಿತ್ರ ಐಡಿಯಾಗಳು ಜಾರಿಗೆ ಬರುತ್ತಲೇ ಇರುತ್ತವೆ. ಗುಹೆಯೊಳಗೆ ಹೋಟೆಲ್ ನಿರ್ಮಿಸುವುದು; ನೀರಿನೊಳಗೆ ಮನೆ ಮಾಡುವುದು ಇತ್ಯಾದಿಗಳನ್ನು ಕೇಳುತ್ತಲೇ ಇರುತ್ತೇವೆ. ಭೂಮಿಯಲ್ಲಿನ ಸ್ವರ್ಗವೆಂದೇ ಕರೆಯಲ್ಪಡುವ ಸ್ವಿಜರ್’ಲ್ಯಾಂಡ್’ನಲ್ಲಿ ರಮ್ಯಮನೋಹರವಾದ ಬೆಟ್ಟದ ಮೇಲೆ ಹೋಟೆಲ್’ವೊಂದು ತಲೆ ಎತ್ತಿದೆ. ಬಾಗಿಲಿರಲಿ, ಗೋಡೆಯೇ ಇಲ್ಲದ ಈ ಹೋಟೆಲ್’ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ…
ಏನೇನಿರುತ್ತೆ?
ಗ್ರಾಬುಂಡೆನ್ ಪರ್ವತ ಶ್ರೇಣಿಯಲ್ಲಿರುವ “ನಲ್ ಸ್ಟರ್ನ್” ಎಂಬ ಈ ಹೋಟೆಲ್’ನಲ್ಲಿ ಒಂದು ಬೆಡ್ ಇರುತ್ತದೆ. ಜೊತೆಗೆ ಎರಡು ಹಣತೆಗಳು ಇರುತ್ತವೆ. ಶೌಚಾಲಯ ಬಳಸಬೇಕೆಂದರೆ 10 ನಿಮಿಷ ನಡಿಗೆಯಷ್ಟು ದೂರದಲ್ಲಿ ಸಾರ್ವಜನಿಕ ಶೌಚಾಲಯ ಬಳಸಬೇಕು. ಸರಿಯಾದ ಸಮಯಕ್ಕೆ ನಿಮಗೆ ಊಟ ತಿಂಡಿಗಳನ್ನು ಸರ್ವ ಮಾಡಲಾಗುತ್ತದೆ. ಇದು ಬಿಟ್ಟರೆ ನೀವು ಈ ಹೋಟೆಲ್’ನಲ್ಲಿ ಬಹಳ ಮುಕ್ತವಾಗಿರಬಹುದು. ರೂಮಿನಲ್ಲಿದ್ದುಕೊಂಡು(ಬೆಡ್) ಸುಂದರ ಪರಿಸರವನ್ನು ಮುಕ್ತವಾಗಿ ಆಸ್ವಾದಿಸಬಹುದು.
ಅಂದಹಾಗೆ, ಈ ಹೋಟೆಲ್’ನಲ್ಲಿ ಒಂದು ರಾತ್ರಿಗೆ 250 ಡಾಲರ್, ಅಂದರೆ ಸುಮಾರು 16 ಸಾವಿರ ರೂಪಾಯಿ ಬೆಲೆ ನಿಗದಿಯಾಗಿದೆ. ನೀವು ಮುಂಗಡವಾಗಿ ರೂಮು ಕಾದಿರಿಸಬಹುದು. ಆದರೆ, ನಿಮ್ಮ ಹಣೆಬರಹಕ್ಕೆ ನೀವು ಬುಕ್ ಮಾಡಿದ ದಿನ ಹವಾಮಾನ ವೈಪರೀತ್ಯವಾದಲ್ಲಿ ಹೋಟೆಲ್’ನವರು ನಿಮ್ಮ ಬುಕಿಂಗ್ ಕ್ಯಾನ್ಸಲ್ ಮಾಡಿಬಿಡುತ್ತಾರೆ.
Comments are closed.