ಇದು ನಿಮ್ಮನ್ನ ಬೆಚ್ಚಿ ಬೀಳಿಸುವಂಥ ನಿಜಕಥೆ. ಯಾಕಂದರೆ ಇಲ್ಲಿ ಹೆಣಗಳೇ ಎದ್ದು ಬರುತ್ತವೆ, ಮೃತ ದೇಹಗಳೇ ಸದ್ದು ಮಾಡುತ್ತವೆ. ಆ ಸದ್ದಿಗೆ ಸಾಕ್ಷಿಯಾದ ಜನರು ಹೆಣಗಳ ಜೊತೆಗೆ ಜೀವನ ನಡೆಸುತ್ತಾರೆ. ಈ ಮನೆಗಳಲ್ಲಿ ಯಾರೇ ಸತ್ತರೂ ಅವರನ್ನು ಸಂಸ್ಕಾರ ಮಾಡಲ್ಲ. ಬದಲಿಗೆ ಆ ಹೆಣಗಳನ್ನ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಅಷ್ಟಕ್ಕೂ ಹೆಣಗಳ ಜೊತೆಯಲ್ಲಿ ಸಂಸಾರ ಮಾಡೋ ಆ ಜನರು ಯಾರು? ಅವರು ಎಲ್ಲಿದ್ದಾರೆ? ಅವರಿಗೆ ದೆವ್ವದ ಭಯ ಆಗೋದಿಲ್ವಾ? ರಾತ್ರಿಯಾದ್ರೆ ಅಲ್ಲಿ ಏನಾಗುತ್ತೆ? ಈ ವರದಿ ಓದಿ.
ಟೋರಜಾ
ಈ ವಿಚಿತ್ರ ಆಚರಣೆಯಿರುವುದು ಇಂಡೋನೇಷ್ಯಾದ ಟೊರಜ ಅನ್ನುವ ಬುಡಕಟ್ಟು ಜನರಲ್ಲಿ. ಶವಗಳನ್ನು ಅಂತ್ಯ ಸಂಸ್ಕಾರ ಮಾಡದೇ, ಆ ಶವಗಳ ಜೊತೆಗೇ ಬದುಕು ದೂಡುವ ವಿಚಿತ್ರ ಸಂಪ್ರದಾಯ ಈ ಬುಡಕಟ್ಟು ಜನರದ್ದು. ಟೊರಜ ಬುಡಕಟ್ಟು ಸಮುದಾಯದಲ್ಲಿ ಯಾರಾದರು ಸತ್ತರೆ ಅವರನ್ನ ಬುಡಕಟ್ಟು ಸಮುದಾಯದಂತೆ ವಿಧಿ ವಿಧಾನಗಳನ್ನು ಪೂರೈಸುತ್ತಾರೆ ಅನುಸರಿಸುತ್ತಾರೆ. ಮೊದಲಿಗೆ ಅವರು ತೊಡುತ್ತಿದ್ದ ಬೆಟ್ಟೆಗಳಲ್ಲಿ ಶವವನ್ನಿಟ್ಟು ಸುತ್ತುತ್ತಾರೆ. ನಂತರ ಬಾಯಿಗೆ ತೀರ್ಥ ಬಿಡುತ್ತಾರೆ. ನಂತರ ಬಟ್ಟೆಗಳಿಂದ ಆ ಮೃತ’ದೇಹವನ್ನು ಬಿಗಿಯಾಗಿ ಕಟ್ಟಲಾಗುತ್ತದೆ. ಅದರೊಳಗೆ ಯಾವ ಕ್ರಿಮಿ ಕೀಟವೂ ಹೋಗದಂತೆ ಬಿಗಿ ಮಾಡಲಾಗುತ್ತದೆ.
ಅಳುವುದಿಲ್ಲ, ಹಾಡಿನ ಮೂಲಕ ಬೀಳ್ಕೊಡುಗೆ
ಅಷ್ಟೋತ್ತಿಗಾಗಲೇ ಹೊರಗಡೆ ಎಲ್ಲಾ ಸಿದ್ಧತೆ ನಡೆದಿರುತ್ತೆ. ವಿಧಿವತ್ತಾಗಿ ಬಟ್ಟೆಯಲ್ಲಿ ಕಟ್ಟಿದ ಮೃತ ದೇಹವನ್ನು ತಂದು, ಇದರಲ್ಲಿ ಇಡಲಾಗುತ್ತೆ. ನಂತರ ಹಾಡಿನ ಮೂಲಕ, ಮೃತರನ್ನ ಬೀಳ್ಕೊಡಲಾಗುತ್ತೆ. ಸ್ವಲ್ಪ ಸಮಯದ ನಂತರ ಶವವನ್ನು ಹೊತ್ತು ಜನರು ಮುಂದೆ ಸಾಗುತ್ತಾರೆ. ಈ ಸಮಯದಲ್ಲಿ ಯಾರೂ ಅಳುವುದಿಲ್ಲ. ಬದಲಿಗೆ ಎಲ್ಲರೂ ಖುಷಿಯಿಂದಲೆ ಶವವನ್ನು ಹೊತ್ತುಕೊಂಡು ಹೋಗುತ್ತಾರೆ. ಇದಕ್ಕೆ ಕಾರಣ ಸತ್ತವರು ನಮ್ಮೊಂದಿಗೆ ಇದ್ದಾರೆ ಅನ್ನುವ ಭಾವನೆ ಇವರದ್ದು. ಶವವನ್ನು ಇಡೋದಕ್ಕಾಗಿ ಬೆಟ್ಟವನ್ನು ಕೊರೆಯಲಾಗುತ್ತದೆ.
ಬೆಟ್ಟದ ಒಂದು ಭಾಗದಲ್ಲಿ ಕಲ್ಲು ಬಂಡೆಯನ್ನು ಕೊರೆದು, ಚಿಕ್ಕ ಕೋಣೆ ನಿರ್ಮಿಸಲಾಗಿರುತ್ತದೆ. ಶವವನ್ನು ಇಲ್ಲಿಗೆ ತಂದ ನಂತರ ಬುಡಕಟ್ಟು ಸಮುದಾಯದ ಪ್ರಕಾರ ಮಂತ್ರೋಪದೇಶ ಮಾಡಲಾಗುತ್ತದೆ. ನಂತರ ಬಟ್ಟೆಯಲ್ಲಿ ಸುತ್ತಿಟ್ಟ ಶವವನ್ನು ಕಲ್ಲುಬಂಡೆಗಳ ನಡುವೆ ಇಡಲಾಗುತ್ತದೆ. ಮೃತ ದೇಹದ ಜೊತೆಗೆ ಅವರು ಬದುಕಿದ್ದಾಗ ಏನೆಲ್ಲಾ ಇಷ್ಟ ಪಡುತ್ತಿದ್ದರೂ ಅದೆಲ್ಲವನ್ನೂ ಶವದ ಜೊತೆಗೆ ಇಡಲಾಗುತ್ತದೆ. ಹೀಗೆ ಎಲ್ಲವನ್ನೂ ಇಟ್ಟ ನಂತರ ಅದನ್ನು ಮುಚ್ಚಲಾಗುತ್ತದೆ.
ನೂರಾರು ವರ್ಷ ಕಳೆದರೂ ಶವಗಳು ಕೊಳೆತಿಲ್ಲ
ಸತ್ತ ನಂತರ ಶವಗಳನ್ನು ಬೆಟ್ಟದಲ್ಲಿ ಇಡಲಾಗುತ್ತೆ. ಆದರೆ ಪ್ರತಿ ವರ್ಷ ಆ ಶವಗಳನ್ನು ಹೊರತೆಗೆದು ಶುದ್ಧ ಮಾಡಲಾಗುತ್ತೆ. ಅಚ್ಚರಿ ವಿಷಯ ಏನು ಗೊತ್ತಾ? ನೂರಾರು ವರ್ಷ ಕಳೆದರೂ ಈ ಶವಗಳು ಕೊಳೆತಿಲ್ಲ ಅನ್ನುವುದು. ಶವಗಳು ಕೊಳೆಯದಿರಲು ಕಾರಣ ರಾಸಾಯನಿಕವನ್ನು ಬಳಸುವುದು.
ಮನೆಯಲ್ಲಿ ಇಟ್ಟುಕೊಂಡು ಊಟ ಮಾಡಿಸುತ್ತಾರೆ
ಈ ಸಮುದಾಯದಲ್ಲಿ ಕೆಲವರು ಮನೆಯಲ್ಲಿಯೂ ಶವಗಳನ್ನು ಇಟ್ಟುಕೊಳ್ಳುತ್ತಾರೆ. ಅದಕ್ಕೆ ಊಟ ಮಾಡಿಸುತ್ತಾರೆ, ನೀರು ಕುಡಿಸ್ತಾರೆ. ಆಗಾಗ ಸ್ನಾನ ಸಹ ಮಾಡಿಸಿ ಬಟ್ಟೆಯನ್ನೂ ಬದಲಿಸುತ್ತಾರೆ.
ಬೇರೆಯವರು ಕಾಲಿಟ್ಟರೆ ಭಯಾನಕ ಅನುಭವ
ಇಲ್ಲಿನ ಸಮುದಾಯದವರು ಬಿಟ್ಟು, ಬೇರೆಯವರು ಇಲ್ಲಿಗೆ ಕಾಲಿಟ್ಟರೆ ವಿಚಿತ್ರವಾದ ಶಬ್ಧಗಳು ಕೇಳಿಸುತ್ತದೆ. ಈ ಬಗ್ಗೆ ತಮ್ಮ ಅನುಭವಗಳನ್ನು ಅನುಭವಿಸಿದವರು ಹೇಳಿಕೊಂಡಿದ್ದಾರೆ.
Comments are closed.